More

    ಬ್ಯಾರಿಕೇಡ್ ಅಳವಡಿಕೆ ಶೇ.90 ಪೂರ್ಣ: ಮಾಜಿ ಸಿಎಂ ಎಚ್‌ಡಿಕೆ ಮಾಹಿತಿ

    ಚನ್ನಪಟ್ಟಣ: ಕಾಡಾನೆ ದಾಳಿಗೆ ಬಲಿಯಾದ ಮಹಿಳೆಯ ಸಾವು ನೋವುಂಟು ಮಾಡಿದೆ. ಆ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದರು.


    ನಗರದಲ್ಲಿ ಗುರುವಾರ ಮಾತನಾಡಿದ ಅವರು, ಕಾಡಾನೆ ದಾಳಿ ತಡೆಗೆ ಈಗಾಗಲೇ ಹಲವಾರು ಸಭೆ ನಡೆಸಿದ್ದೇನೆ. ಡಿಸಿ ಕಚೇರಿಯಲ್ಲಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೂ ಸಭೆ ನಡೆಸಿದ್ದೇನೆ. ಕಾಡಾನೆಗಳನ್ನು ಸಾಗಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಬಂಡಿಪುರದಿಂದ ಸಾಕಿದ ಆನೆಗಳನ್ನು ತಂದು ಪುಂಡಾನೆಗಳನ್ನು ಓಡಿಸಲು ಕ್ರಮ ವಹಿಸಲಾಗಿದೆ. ಮಾವುತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ವಿಳಂಬವಾಗಿದೆ. ಈಗ ಸಮಸ್ಯೆ ಬಗೆಹರಿದಿದ್ದು, ಮಾವುತರು ಕಾರ್ಯಾಚರಣೆಗೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

    ಕಾಡಾನೆ ತಡೆಗಟ್ಟಲು ನಡೆಯುತ್ತಿರುವ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿ ಪರಿಶೀಲನೆ ನಡೆಸಿದ್ದೇನೆ. ದುಂತೂರು ಬಳಿ ಆನೆ ಕಾರಿಡಾರ್‌ಗೆ ತಕರಾರು ಇದೆ. ರಾತ್ರಿಯಿಡೀ ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದೇನೆ. ಈಗಾಗಲೇ 90% ತಡೆಗೋಡೆ ಕೆಲಸವಾಗಿದೆ. ಇನ್ನೂ ಮೂರು ಭಾಗದಲ್ಲಿ ಕೆಲಸ ಆಗಬೇಕಿದೆ. ತಕರಾರು ಬಗೆಹರಿಸಲು ತೀರ್ವಾನ ಮಾಡಲಾಗಿದೆ. ಈ ಕಾಮಗಾರಿ ಮುಗಿದರೆ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಈ ನಿಟ್ಟಿನಲ್ಲಿ ಪ್ರಾವಾಣಿಕ ಪ್ರಯತ್ನ ಮಾಡಿದ್ದೇನೆ. ಬೇರೆಯವರಿಂದ ಸರ್ಟಿಫಿಕೇಟ್ ಬೇಕಿಲ್ಲ ಎಂದರು.

    ಹೆದ್ದಾರಿ ಬೈಪಾಸ್ ಕಾಮಗಾರಿಗೆ ಅಸಮಾಧಾನ: ಬೆಂಗಳೂರು – ಮೈಸೂರು ಬೈಪಾಸ್ ಹೆದ್ದಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, ಅವೈಜ್ಞಾನಿಕ ರೀತಿಯಲ್ಲಿ ಡಿಬಿಎಲ್ ಕಂಪನಿ ಕೆಲಸ ಮಾಡುತ್ತಿದೆ. ಅಂಡರ್‌ಪಾಸ್‌ಗಳು ಸರಿಯಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಸಂಬಂಧಪಟ್ಟವರ ಜತೆ ಮಾತನಾಡಿದ್ದೇನೆ. ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು. ಸಬೂಬು ಹೇಳದೆ ಕೆಲಸ ವಾಡಿ ಎಂದು ತಿಳಿಸಿದ್ದೇನೆ ಎಂದು ಎಚ್‌ಡಿಕೆ ತಿಳಿಸಿದರು.

    ಜನರ ಬದುಕು ಮುಖ್ಯ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಕುವಾರಸ್ವಾಮಿ, ಬಿಜೆಪಿಯ ಸಿಎಂ ಬದಲಾವಣೆ ವಿಚಾರ ಕಟ್ಟಿಕೊಂಡು ನನಗೆ ಏನಾಗಬೇಕಿದೆ? ನನ್ನ ಗಮನ ಏನಿದ್ದರೂ 2023ರ ಸಾರ್ವತ್ರಿಕ ಚುನಾವಣೆ ಅಷ್ಟೆ. ರಾಜ್ಯ ರಾಜಕಾರಣದಲ್ಲಿ ಹಲವಾರು ಮಾಹಿತಿಗಳು ಹೊರಬರುತ್ತವೆ. ನನಗೆ ಬೇಕಾಗಿರೋದು ಜನರ ಬದುಕು, ಇವತ್ತು ಸಾವಿರಾರು ಮನೆಗಳು ಬಿದ್ದಿವೆ, ಸಾವಿರಾರು ಹೆಕ್ಟೇರ್ ಜಮೀನು ಹಾಳಾಗಿವೆ. ಅರಕಲಗೂಡಿನಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಕಣ್ಣೀರು ಹಾಕಿ, ಬೀದಿ ಪಾಲಾಗಿದ್ದೇವೆ, ಮನೆ ಕಟ್ಟಿಸಿಕೊಡಿ ಎಂದು ಅಳಲು ತೋಡಿಕೊಂಡರು. ನನಗೆ ಬೇಕಾಗಿರೋದು ಇಂತಹ ಜನಪರ ಕೆಲಸ, ಯಾವ ಸಿಎಂ ಕಟ್ಟಿಕೊಂಡೇನು, ಮಂತ್ರಿ ಕಟ್ಟಿಕೊಂಡು ನನಗೇನು ಎಂದು ಎಚ್‌ಡಿಕೆ ಹೇಳಿದರು.

    ವಿಜಯವಾಣಿ ವರದಿ ಪ್ರಸ್ತಾಪ: ವಿಜಯವಾಣಿ ಬುಧವಾರದ ಸಂಚಿಕೆಯಲ್ಲಿ ಪ್ರಕಟವಾಗಿದ್ದ ‘ಸಾರ್, ನಮಗೆ ಮೊಟ್ಟೆ ಇಲ್ವಾ?’ ವರದಿ ಬಗ್ಗೆ ಪ್ರತಿಯಿಸಿದ ಎಚ್.ಡಿ. ಕುಮಾರಸ್ವಾಮಿ, ಈ ಸರ್ಕಾರದಲ್ಲಿ ಬರೀ ಮೊಟ್ಟೆಗಲ್ಲ, ಎಲ್ಲ ವಿಷಯಗಳಲ್ಲೂ ತಾರತಮ್ಯವೇ. ಸರ್ಕಾರ ಎಲ್ಲರಿಗೂ ಮೊಟ್ಟೆ ವಿತರಿಸಲಿ ಎಂದು ಸಲಹೆ ನೀಡಿದರು.


    ನನ್ನ ಅಧಿಕಾರವಧಿಯಲ್ಲಿ ಲಾಟರಿ ನಿಷೇಧ ಮಾಡಿಹತ್ತನೆಯ ತರಗತಿಯವರೆಗೆ ಬಿಸಿಯೂಟ ವಿಸ್ತರಣೆ ಮಾಡಿದ್ದೆ. ನಾನು ಸಿಎಂ ಆಗಿದ್ದಾಗ ಒಬ್ಬ ಯುವಕ ನನ್ನ ಮನೆ ಬಾಗಿಲ ಬಳಿ ಬಂದು ಆನ್‌ಲೈನ್ ಲಾಟರಿ ವ್ಯಾಮೋಹದಿಂದ ಹಾಳಾಗಿದ್ದೇನೆ. ನನ್ನ ಜೀವನ ಹಾಳು ಮಾಡಿಕೊಂಡು ಸಾಲಗಾರ ಆಗಿದ್ದೇನೆ. ನೀವು ಹಣ ನೀಡದೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಹೆದರಿಸಿದ. ಅವತ್ತೇ ನಾನು ಲಾಟರಿ ನಿಷೇಧ ಮಾಡಿದೆ. ಲಾಟರಿಯಿಂದ ಬರುವ ತೆರಿಗೆ ಹಣದಿಂದ ಮಕ್ಕಳಿಗೆ ಬಿಸಿಯೂಟಕ್ಕೆ ನೀಡಲು ಮನಸ್ಸು ಬಾರದೆ ಲಾಟರಿ ನಿಷೇಧ ಮಾಡಿದ್ದೆ ಎಂದರು.

    ಸಿಎನ್‌ಎ ವಿರುದ್ಧ ಕಿಡಿ: ಬಿಬಿಎಂಪಿಯಲ್ಲಿ ಲೂಟಿ ಹೊಡೆದು, ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವರನ್ನು ಕಟ್ಟಿಕೊಂಡು ನನ್ನ ಸರ್ಕಾರ ತೆಗೆಯಲು ಏನೇನು ಆಟ ಆಡಿದರು ಎಂಬುದು ನನಗೆ ಗೊತ್ತಿದೆ. ಇವರಿಂದ ನಾನು ಬದುಕು ಕಲಿಯಬೇಕಿಲ್ಲ ಎಂದು ಅಶ್ವತ್ಥನಾರಾಯಣ್ ವಿರುದ್ಧ ಮಾಜಿ ಸಿಎಂ ಎಚ್‌ಡಿಕೆ ಕಿಡಿಕಾರಿದರು.

    ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು, ಜೆಡಿಎಸ್ ಮುಖಂಡರಾದ ಸಿಂ.ಲಿಂ.ನಾಗರಾಜು, ಭಾನುಪ್ರಸಾದ್, ಬಿಳಿಯಪ್ಪ, ಎಸ್.ಟಿ. ನಾರಾಯಣಗೌಡ, ರೇಖಾ ಉವಾಶಂಕರ್, ಮಲ್ಲೇಶ್ ದ್ಯಾವಪಟ್ಟಣ, ಕೂಡ್ಲೂರು ಗೊಂವಿಂದೇಗೌಡ, ಗಂಗೇದೊಡ್ಡಿ ಬೋರೇಗೌಡ, ವಿನೋದ್‌ಕುವಾರ್, ಆಶಿಶ್ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts