More

    ಆಸ್ಟ್ರೇಲಿಯಾದಲ್ಲಿ ರಾಮನವಮಿ, ಯುಗಾದಿ ಆಚರಣೆ

    ಮೂಲ್ಕಿ: ಅಮೀ ಏಕ್ ಕುಟುಂಬ್ ವತಿಯಿಂದ ಆಸ್ಟ್ರೇಲಿಯಾದಲ್ಲಿ ಯುಗಾದಿ, ರಾಮನವಮಿ ಆಚರಣೆ ನಡೆಯಿತು. ಮುನ್ನೂರಕ್ಕೂ ಅಧಿಕ ಸದಸ್ಯರು ಸಾಂಪ್ರದಾಯಿಕ ಉಡುಗೆಗಳಲ್ಲಿ ಭಾಗವಹಿಸಿದ್ದರು.

    ಶ್ರೀರಾಮ ನವಮಿಯ ಪೂಜೆ, ಅಭಿಷೇಕ, ಭಜನೆ, ರಾಮ ಜಪ, ನೈವೇದ್ಯ ಆರತಿ, ಯುಗಾದಿ ಆಚರಣೆಯ ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ತಿಳಿವಳಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು.

    ವಿದೇಶದಲ್ಲಿ ಹಲವು ದಶಕಗಳಿಂದ ವಾಸವಿದ್ದ ಕುಟುಂಬಗಳ ಹೊಸ ಚಿಗುರು ಭಾರತೀಯ ಸಂಪ್ರದಾಯಗಳನ್ನು ಮರೆಯುತ್ತಿದ್ದು ಮಾತೃ ಭಾಷೆ ಹಾಗೂ ಸಂಸ್ಕೃತಿ ಸಂಸ್ಕಾರಗಳ ತಿಳಿವಳಿಕೆಯ ಜತೆಗೆ ಧಾರ್ಮಿಕ ಸಾಂಸ್ಕೃತಿಕ ಉನ್ನತಿ ಹಾಗೂ ಸಂಘಟಿತರಾಗಿ ಬೆಳೆಯಲು ಅಮೀ ಏಕ್ ಕುಟುಂಬ್ ಸಂಸ್ಥೆಯನ್ನು 2022ರಲ್ಲಿ ಸ್ಥಾಪಿಸಲಾಗಿದೆ ಎಂದು ಕಾಮಾಕ್ಷಿ ಶೆಣೈ ತಿಳಿಸಿದರು.

    ಊಟ ವೈವಿಧ್ಯ

    ಭಾರತೀಯ ಸಂಪ್ರದಾಯದಂತೆ ನೆಲದಲ್ಲಿ ಕುಳಿತು ಬಾಳೆ ಎಲೆಯಲ್ಲಿ ಊಟ, ಗೌಡ ಸಾರಸ್ವತರ ವಿಶೇಷತೆಗಳಾದ ಕೊಟ್ಟಿಗೆ, ಗಸಿ, ಗೇರುಬೀಜ ತೊಂಡೆಕಾಯಿ, ಅನ್ನ, ದಾಲ್, ತೋವೆ, ಪಾಯಸ ಮೊದಲಾದ ಭಕ್ಷಗಳನ್ನು ಬಡಿಸಲಾಯಿತು.

    ಗೌಡ ಸಾರಸ್ವತರ ಕೊಂಕಣಿ ಭಾಷೆಯ ಅಭಿವೃದ್ಧಿ, ಮಾತೃ ಭಾಷೆಯ ಅರಿವು ಯುವ ಸಮಾಜಕ್ಕೆ ನೀಡುವ ಜತೆಗೆ ಭಾರತೀಯ ಸಂಪ್ರದಾಯ ಕಲಿಸುವ ಕಾರ್ಯ ಅಭಿನಂದನೀಯ.
    – ಪ್ರೀತಿ ಸುನೀಲ್ ರಾವ್ ಆಸ್ಟ್ರೇಲಿಯಾ

    ಗೌಡ ಸಾರಸ್ವತರ ಪರಂಪರೆಯಿಂದ ಬಂದಿರುವ ಸಂಸ್ಕಾರ ಭಾಷೆ ಹಾಗೂ ಸಂಸ್ಕೃತಿಯ ಉಳಿಕೆ ಮತ್ತು ಪರದೇಶದಲ್ಲಿ ಸಂಘಟಿತರಾಗಿ ಶಕ್ತಿವಂತರಾಗಲು ಅಮೀ ಏಕ್ ಕುಟುಂಬ್ ಪ್ರಯತ್ನ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಗಣೇಶೋತ್ಸವ ಸಹಿತ ಎಲ್ಲ ಹಬ್ಬಹರಿದಿನಗಳನ್ನು ಆಚರಿಸಲಾಗುವುದು.
    – ಹೇಮಂತ್ ನಾಯಕ್ ಆಸ್ಟ್ರೇಲಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts