More

    ರಾಮ ಮಂದಿರಕ್ಕಾಗಿ ದೇವದುರ್ಗದಲ್ಲಿ ನಿಧಿ ಸಂಗ್ರಹಕ್ಕೆ ಚಾಲನೆ; ಜ.15ರಿಂದ ಫೆ.20ರವರೆಗೆ ನಡೆಯಲಿದೆ ಅಭಿಯಾನ

    ದೇವದುರ್ಗ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಹಿಂದು ಸಂಘಟನೆಗಳು ಕೈಗೊಂಡ ನಿಧಿ ಸಂಗ್ರಹ ಅಭಿಯಾನ ಅಂಗವಾಗಿ ಇಲ್ಲಿನ ಖೇಣೇದ್ ಮುರಿಗೆಪ್ಪ ಫಂಕ್ಷನ್ ಹಾಲ್‌ನಲ್ಲಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ವಿವಿಧ ಹಿಂದುಪರ ಸಂಘಟನೆಗಳು ಮಂಗಳವಾರ ಬೈಠಕ್ ನಡೆಸಿ ಅಭಿಯಾನದ ರೂಪುರೇಷೆ ಬಗ್ಗೆ ಚರ್ಚಿಸಿದವು.

    ಮನೆ ಮನೆ ಸಂಪರ್ಕ, ದೇವಸ್ಥಾನ ಭೇಟಿ, ಎಲ್ಲ ಸಮುದಾಯಗಳ ಪ್ರಮುಖ ಸಂಪರ್ಕ, ಮಠದ ಪೂಜ್ಯರು, ಸಾಧು ಸಂತರು, ಸ್ವಾಮೀಜಿಗಳು, ಮಹಿಳೆಯರನ್ನು ಭೇಟಿ ದೇಣಿಗೆ ಪಡೆಯುವುದು. ಜನರಿಗೆ ರಾಮಜನ್ಮ ಭೂಮಿ ಹೋರಾಟ, ಪ್ರಾಮುಖತೆ ಬಗ್ಗೆ ಅರಿವು ಮೂಡಿಸುವ ಬಗ್ಗೆ ಪದಾಧಿಕಾರಿಗಳಿಗೆ ಸಲಹೆ ನೀಡಲಾಯಿತು.

    ಆರೆಸ್ಸೆಸ್ ಬಳ್ಳಾರಿ ಪ್ರಾಂತ ಪ್ರಭಾರ ಸತೀಶ ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಪ್ರತಿ ಮೂಲೆಮೂಲೆಯಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶ ವ್ಯಾಪ್ತಿಯ ಪ್ರತಿ ಮನೆಮನೆಗೆ ಭೇಟಿ ನೀಡಿ ನಿಧಿ ಸಂಗ್ರಹಿಸಲು ಎಲ್ಲ ಸ್ವಯಂ ಸೇವಕರು, ರಾಮ ಭಕ್ತರು ಕೈ ಜೋಡಿಸಬೇಕು. ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದಲ್ಲಿ ಹಲವರು ತ್ಯಾಗ ಮಾಡಿದ್ದಾರೆ. ಭಾರತ ದೇಗುಲಗಳ ನಾಡಾಗಿದೆ. ಶ್ರೀರಾಮನ ಪುಣ್ಯ ಭೂಮಿಯಲ್ಲಿ ನಾವು ಜನಿಸಿರುವುದು ಪುಣ್ಯ ಎಂದರು.

    ಮುಖಂಡರಾದ ಅನಂತರಾಜ ನಾಯಕ, ಶ್ಯಾಮರಾವ್ ಕುಲಕರ್ಣಿ, ಡಾ.ಎಚ್.ಎ.ನಾಡಗೌಡ, ರಾಯಚೂರು ಎಪಿಎಂಸಿ ಅಧ್ಯಕ್ಷ ರಾಮನಗೌಡ ಕರಡಿಗುಡ್ಡ, ಲಿಂಗನಗೌಡ ಜೋಳದಹೆಡಗಿ, ದೇವೀಂದ್ರಪ್ಪ ಸಾಸ್ವೀಗೇರಾ, ಶಿವಶಂಕರ ಪಾಟೀಲ್, ನಾಗರಾಜ ಪಾಟೀಲ್ ಗೋಪಳಾಪುರ, ಬಸವರಾಜ ಗಾಣಧಾಳ, ಮಲ್ಲಿಕಾರ್ಜುನ ಪಾಟೀಲ್ ಹಿರೇಬೂದೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts