More

    ಅಯೋಧ್ಯೆ ಶ್ರೀರಾಮನ ವಿಗ್ರಹ ಭಕ್ತರಿಗೆ ಇನ್ನು ತೀರ ಹತ್ತಿರ: ಬುಲೆಟ್​ ಪ್ರೂಫ್​​ ದೇಗುಲಕ್ಕೆ ಶೀಘ್ರ ಸ್ಥಳಾಂತರವಾಗಲಿರುವ ರಾಮ್​ಲಲ್ಲಾ ಮೂರ್ತಿ

    ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮನ ಆಶೀರ್ವಾದ ಪಡೆಯುವ ಭಕ್ತರಿಗೊಂದು ಸಂತಸದ ಸುದ್ದಿ ಇದು. ಇನ್ನು ಭಕ್ತರು ರಾಮ್ ಲಲ್ಲಾ ವಿಗ್ರಹವನ್ನು ತೀರ ಹತ್ತಿರದಿಂದ ದರ್ಶನ ಪಡೆಯಬಹುದು ಎಂದು ವಿಶ್ವ ಹಿಂದು ಪರಿಷತ್ (ವಿಎಚ್‌ಪಿ ) ಮುಖಂಡ ವಿನೋದ್ ಕುಮಾರ್ ಬನ್ಸಾಲ್ ತಿಳಿಸಿದರು.

    ರಾಮ್​ ಲಲ್ಲಾ ವಿಗ್ರಹವನ್ನು ದೇವಾಲಯದ ಸಮೀಪವಿರುವ ಗುಂಡು ನಿರೋಧಕ ಆವರಣದಲ್ಲಿ ವರ್ಗಾಯಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಈಗ ಸದ್ಯ ರಾಮನ ಮೂರ್ತಿಯನ್ನು 52 ಅಡಿಗಳಷ್ಟು ದೂರದಿಂದ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ಕೇವಲ 22 ಅಡಿ ಹತ್ತಿರದಲ್ಲಿ ರಾಮನ ಮೂರ್ತಿಯನ್ನು ಕಣ್ತುಂಬಿಕೊಳ್ಳಬಹುದು.

    ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುವುದು. ಸ್ಕ್ಯಾನಿಂಗ್​ ಮಷಿನ್​ ಕೂಡ ಅಳವಡಿಸಲಾಗುವುದು. ಲಗೇಜು ಇಡುವ ಸ್ಥಳದ ವ್ಯವಸ್ಥೆ ಮಾಡಲಾಗಿದ್ದು, ಹಿರಿಯ ನಾಗರಿಕರಿಗೆ ಆವಶ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

    ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಾರ್ಚ್​ 25ರಿಂದ ಹೊಸ ಸ್ಥಳದಲ್ಲಿ ಪೂಜೆಗೊಳ್ಳಲಿದ್ದಾನೆ. ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಹೊಸ ಹೊಸ ದೇಗುಲ ನಿರ್ಮಾಣ ಕಾರ್ಯಕ್ಕೆ ಸಿದ್ಧತೆ ನಡೆಸಿದೆ. ದೇಗುಲ ಸಂಪೂರ್ಣ ಗುಂಡು ನಿರೋಧಕವಾಗಿರಲಿದೆ. ಅಲ್ಲದೆ ಬುಲೆಟ್​ ಪ್ರೂಫ್​ ಗಾಜನ್ನು ಅಳವಡಿಸಲಾಗುವುದು ಎಂದರು.

    ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ಬಗ್ಗೆ ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಏಪ್ರಿಲ್​ 2ರ ನಂತರ ಮಾಹಿತಿ ನೀಡಲಿದೆ. ಅಂದೇ ರಾಮ ನವಮಿ ಆಚರಿಸಲಾಗುತ್ತಿದೆ. ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

    ಟ್ರಸ್ಟ್‌ನ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಎಂಜಿನಿಯರ್‌ಗಳೊಂದಿಗೆ ಭಾನುವಾರ ಅಯೋಧ್ಯೆಯಲ್ಲಿ ಪರಿಶೀಲನೆ ನಡೆಸಿದರು. ಈ ಮಾಹಿತಿಯನ್ನು ಅವರು ಪ್ರಧಾನಮಂತ್ರಿಗೆ ನೀಡಲಿದ್ದಾರೆ. ಇಂಜಿನಿಯರ್​ಗಳು ಸಂಗ್ರಹಿಸಿರುವ ಮಾಹಿತಿ ಬಗ್ಗೆ ಮಾರ್ಚ್​ 25ರಂದು ವರದಿ ಸಲ್ಲಿಸಲಿದ್ದಾರೆ. (ಏಜೆನ್ಸೀಸ್​) 

    ಪರ್ಯಾಯ ಮಂಟಪಕ್ಕೆ ರಾಮಲಲ್ಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts