More

    ಆಸ್ಕರ್​ ಪ್ರಶಸ್ತಿ ಗೆದ್ದು ಭಾರತಕ್ಕೆ ಮರಳಿದ ಬೆನ್ನಲ್ಲೇ ಅಮಿತ್​ ಷಾ ಭೇಟಿ ಮಾಡಿದ ರಾಮ್​ ಚರಣ್!​

    ನವದೆಹಲಿ: ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಗೆದ್ದು ಭಾರತಕ್ಕೆ ಮರಳಿರುವ ಆರ್​ಆರ್​ಆರ್​ ಸಿನಿಮಾ ತಂಡ ತಮ್ಮ ವಿಜಯೋತ್ಸವವನ್ನು ಮುಂದುವರಿಸಿದೆ. ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಒಬ್ಬರಾದ ರಾಮ್ ​ಚರಣ್ ತಮ್ಮ ತಂದೆ ಚಿರಂಜೀವಿ ಜತೆ ಶುಕ್ರವಾರ ನವದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರನ್ನು ಭೇಟಿ ಮಾಡಿದ್ದಾರೆ.

    ರಾಮ್ ಚರಣ್ ಅವರು ಗೃಹ ಸಚಿವರಿಗೆ ಪುಷ್ಪಗುಚ್ಛ ಮತ್ತು ಸಾಂಪ್ರದಾಯಿಕ ರೇಷ್ಮೆ ಕಂಠವಸ್ತ್ರ ನೀಡಿ ಸ್ವಾಗತಿಸಿದರು. ಆಸ್ಕರ್​ ಪ್ರಶಸ್ತಿ ಗೆದ್ದ ಆರ್​ಆರ್​ಆರ್​ ತಂಡಕ್ಕೆ ಅಮಿತ್​ ಷಾ ಶುಭಕೋರಿದರು ಮತ್ತು ರಾಮ್ ​ಚರಣ್​ಗೆ ಷಾ ಕೂಡ ರೇಷ್ಮೆ ಕಂಠವಸ್ತ್ರ ಹಾಕಿ ಗೌರವಿಸಿದರು.

    ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮಹಡಿಯಿಂದ ಬಿದ್ದು ಗಗನಸಖಿ ಸಾವು ಪ್ರಕರಣ: ಕೊನೆಗೂ ತಪ್ಪೊಪ್ಪಿಕೊಂಡ ಪ್ರಿಯಕರ

    ರಾಮ್​ ಚರಣ್​ ಅವರು ಶೀಘ್ರದಲ್ಲೇ ಪ್ರಧಾನಿ ಮೋದಿ ಅವರನ್ನು ಸಹ ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ಭಾರತಕ್ಕೆ ಮರಳಿದ ಆರ್​ಆರ್​ಆರ್​ ತಂಡಕ್ಕೆ ಅದ್ಧೂರಿ ಸ್ವಾಗತ ದೊರೆಯಿತು. ವಿಮಾನ ನಿಲ್ದಾಣದ ಸುತ್ತಮುತ್ತ ಅಭಿನಂದನೆಗಳ ಬ್ಯಾನರ್​ಗಳು ರಾರಾಜಿಸಿದವು. ತೆರೆದ ಕಾರಿನಲ್ಲಿ ಅಭಿಮಾನಿಗಳ ಜೊತೆ ಮುಖಾಮುಖಿಯಾಗುವುದಾಗಿ ರಾಮ್​ ಚರಣ್​ ಭರವಸೆ ನೀಡಿದ್ದಾರೆ.

    ಆಸ್ಕರ್​ ಪ್ರಶಸ್ತಿ ಗೆಲುವಿನ ಬಗ್ಗೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್ ಚರಣ್, ನನಗೆ ತುಂಬಾ ಸಂತೋಷವಾಗಿದೆ. ಎಲ್ಲರಿಗೂ ಧನ್ಯವಾದಗಳು. ಪ್ರಶಸ್ತಿ ವಿಚಾರದಲ್ಲಿ ನಾವು ಎಂಎಂ ಕೀರವಾಣಿ, ಎಸ್.ಎಸ್. ರಾಜಮೌಳಿ ಮತ್ತು ಚಂದ್ರಬೋಸ್ ಬಗ್ಗೆ ಹೆಮ್ಮೆಪಡುತ್ತೇವೆ. ಅವರ ಕಠಿಣ ಪರಿಶ್ರಮ ಇಂದು ಭಾರತಕ್ಕೆ ಆಸ್ಕರ್ ತಂದುಕೊಟ್ಟಿದೆ ಎಂದರು.

    ನಾಟು ನಾಟು ಹಾಡು ಭಾರತದ ಜನರ ಹಾಡು ಎಂದು ರಾಮ್​ ಚರಣ್​ ಇದೇ ಸಂದರ್ಭದಲ್ಲಿ ಬಣ್ಣಿಸಿದರು.

    ಇದನ್ನೂ ಓದಿ: ಕೈ ಹಿಡಿಯಲು ಬಯಸಿದವರಿಗೆ ಮಣೆ, ಆಕಾಂಕ್ಷಿಗಳಿಗೆ ಆತಂಕ!; ಕಾಂಗ್ರೆಸ್ ಟಿಕೆಟ್ ಹಂಚಿಕೆ ಕುರಿತು ದೆಹಲಿಯಲ್ಲಿ ಚರ್ಚೆ

    ಆರ್‌ಆರ್‌ಆರ್ ಸಿನಿಮಾವನ್ನು ವೀಕ್ಷಿಸಿದ ಮತ್ತು ‘ನಾಟು ನಾಟು’ ಹಾಡನ್ನು ಸೂಪರ್‌ಹಿಟ್ ಮಾಡಿದಕ್ಕಾಗಿ ಭಾರತದ ಉತ್ತರದಿಂದ ದಕ್ಷಿಣ ಮತ್ತು ಪೂರ್ವದಿಂದ ಪಶ್ಚಿಮ ಭಾಗದ ಎಲ್ಲಾ ಅಭಿಮಾನಿಗಳು ಮತ್ತು ಜನರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ನಾಟು ನಾಟು ನಮ್ಮ ಹಾಡು ಅಲ್ಲ ಅದು ಭಾರತದ ಜನರ ಹಾಡು. ಆಸ್ಕರ್ ಪ್ರಶಸ್ತಿಗಾಗಿ ಈ ಹಾಡು ನಮಗೆ ಒಂದು ಮಾರ್ಗವನ್ನು ನೀಡಿತು ಎಂದು ಹೇಳಿದರು.

    ಅಂದಹಾಗೆ ಮೂಲಗೀತೆ ವಿಭಾಗದಲ್ಲಿ ಆರ್​​ಆರ್​ಆರ್​ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್​ ಪ್ರಶಸ್ತಿ ಲಭಿಸಿದೆ. ಆಸ್ಕರ್​ಗೆ ನಾಮನಿರ್ದೇಶನಗೊಂಡ ಮೊದಲ ತೆಲುಗು ಹಾಡು ಎಂಬ ಹೆಗ್ಗಳಿಗೂ ನಾಟು ನಾಟು ಪಾತ್ರವಾಗಿದೆ. (ಏಜೆನ್ಸೀಸ್​)

    ರ್ರಿ.. ನಾ ಈಗರ ಋಷಿ ಪಂಚಮಿ ಹಿಡಿಲೇನು?

    ರಾಜ್ಯಕ್ಕೆ ಬರಲಿದ್ದಾನೆ ಪಿಎಂ ಮಿತ್ರ: ಪ್ರಧಾನಿ ಮೋದಿ ಘೋಷಣೆ; ಕಲಬುರಗಿಯಲ್ಲಿ ಮೆಗಾ ಟೆಕ್ಸ್​ಟೈಲ್ ಪಾರ್ಕ್ ಸ್ಥಾಪನೆ

    ಮದ್ವೆ ಹಿಂದಿದೆ ಅದೊಂದು ಪ್ಲಾನ್​: ಪವಿತ್ರಾ ಲೋಕೇಶ್​ ವಿರುದ್ಧ ಮಾಜಿ ಪತಿ ಸುಚೇಂದ್ರ ಪ್ರಸಾದ್ ಗಂಭೀರ ಆರೋಪ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts