More

    ವೇದಿಕೆಯಲ್ಲೇ ರಕ್ಷಾಬಂಧನ ಆಚರಣೆ: ಸಿಎಂ, ಸಚಿವರಿಗೆ ರಾಖಿ ಕಟ್ಟಿ ಶುಭಾಷಯ ಹೇಳಿದ ಮಹಿಳೆಯರು

    ಮಂಡ್ಯ: ನಗರದ ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದ ವೇಳೆಗೆ ಕೆಲ ಮಹಿಳೆಯರು ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಕೆ.ಗೋಪಾಲಯ್ಯ ಮತ್ತು ಕೆ.ಸಿ.ನಾರಾಯಣಗೌಡ ಅವರಿಗೆ ರಾಖಿ ಕಟ್ಟಿ ರಕ್ಷಾಬಂಧನದ ಶುಭಾಷಯ ಕೋರಿದರು.

    ಬಳಿಕ ಮಾತನಾಡಿದ ಸಿಎಂ, ಮೈಶುಗರ್ ಕಾರ್ಖಾನೆ ಪುನಶ್ಚೇತನ ಕೆಲಸ ಅಂತಿಮ ಹಂತದಲ್ಲಿದ್ದು, ಬಾಯ್ಲರ್ ಗೆ ಅಗ್ನಿ ಸ್ಪರ್ಶಿಸುವ ಕಾರ್ಯಕ್ರಮ ನಡೆದಿದೆ. ಮುಂದಿನ ದಿನದಲ್ಲಿ ಕಬ್ಬು ಅರೆಯಲು ಚಾಲನೆ ನೀಡಲಾಗುವುದು. ಕಾರ್ಖಾನೆ ಸರ್ಕಾರ /ಖಾಸಗಿ ಸಹಭಾಗಿತ್ವದಲ್ಲಿ ನಡೆಸುವ ಬಗ್ಗೆ ಜಿಜ್ಞಾಸೆ ಮೂಡಿತು. ರೈತರೊಂದಿಗೆ ಚರ್ಚಿಸಿದ ನಂತರ 50 ಕೋಟಿ ರೂ ನೀಡಿ ಸರ್ಕಾರವೇ ಕಾರ್ಖಾನೆ ನಡೆಸಲು ಮುಂದಾಯಿತು. ಕಾರ್ಖಾನೆ ನಿರಂತರವಾಗಿ ನಡೆಸಲು ಬೇಕಿರುವ ಅನುದಾನವನ್ನು ನೀಡಲಾಗುವುದು.ರೈತರಿಗೆ ಈ ಕಾರ್ಖಾನೆ ಸದಾ ಆಶ್ರಯವನ್ನು ನೀಡುವಂತೆ ಮಾಡುತ್ತೇನೆ ಎಂದು ಹೇಳಿದರು.
    ಮಂಡ್ಯ ಜಿಲ್ಲೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಇಲ್ಲಿಯ ರೈತರು ಶ್ರಮ ಜೀವಿಗಳು, ಸ್ವಾಭಿಮಾನಿಗಳು. ದೇಶಕ್ಕೆ ಅನ್ನ ನೀಡುವವರು. ಪ್ರತಿಯೊಬ್ಬರೂ ರೈತರ ಭಾವನೆಗಳಿಗೆ ಗೌರವ ನೀಡಬೇಕು. ಮಂಡ್ಯದ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ನಾನು ನೀರಾವರಿ ಸಚಿವರಾಗಿದ್ದಾಗ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಭವನವನ್ನು ಉದ್ಘಾಟನೆ ಮಾಡಿದ್ದೇನೆ. ವಿ.ಸಿ ನಾಲೆಯ ಸಮಗ್ರ ಅಭಿವೃದ್ದಿಗೆ 500 ಕೋಟಿ ನೀಡಲಾಗಿತ್ತು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts