More

    ರೈತ ಹೋರಾಟದ ಮುಖ್ಯಸ್ಥ ರಾಕೇಶ್​ ಟಿಕೈಟ್​ 80 ಕೋಟಿ ರೂ. ಆಸ್ತಿ ಒಡೆಯ! 4 ರಾಜ್ಯಗಳಲ್ಲಿದೆ ಕೋಟಿ ಕೋಟಿ ಬೆಲೆಯ ಆಸ್ತಿ!

    ನವದೆಹಲಿ: ಕಳೆದ ಕೆಲ ತಿಂಗಳಿನಿಂದ ರಾಷ್ಟ್ರ ರಾಜಧಾನಿ ನವದೆಹಲಿಯ ಗಡಿ ಭಾಗಗಳಲ್ಲಿ ರೈತ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಸಲಾಗುತ್ತಿರುವ ಹೋರಾಟಕ್ಕೆ ಭಾರತೀಯ ಕಿಸಾನ್​ ಯೂನಿಯನ್​ ಸಂಘಟನೆಯ ಮುಖಂಡ ರಾಕೇಶ್​ ಟಿಕೈಟ್​ ನೇತೃತ್ವ ವಹಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ರಾಕೇಶ್​ ಟಿಕೈಟ್​ ಅವರ ಆರ್ಥಿಕ ಪರಿಸ್ಥಿತಿ ಹೇಗಿದೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

    ರಾಕೇಶ್​ ಟಿಕೈಟ್ ಅವರು ಬಹುಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ವರದಿಗಳ ಪ್ರಕಾರ ಅವರಿಗೆ ನಾಲ್ಕು ರಾಜ್ಯಗಳಲ್ಲಿ ಆಸ್ತಿಯಿದೆ. ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಆಸ್ತಿ ಹೊಂದಿದ್ದಾರೆ. ಈ ನಾಲ್ಕು ರಾಜ್ಯಗಳಲ್ಲಿರುವ ಪ್ರಮುಖ 13 ನಗರಗಳಲ್ಲಿ ಸುಮಾರು 80 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅವರಿಗೆಯಂತೆ. ಮುಕಫರ್ನಗರ, ಲಲಿತ್‌ಪುರ, ಲಖಿಂಪುರ್ ಖೇರಿ, ಬಿಜ್ನೋರ್, ಬಡಾನ್, ದೆಹಲಿ, ನೋಯ್ಡಾ, ಗಾಜಿಯಾಬಾದ್, ಡೆಹ್ರಾಡೂನ್, ರೂರ್ಕಿ, ಹರಿದ್ವಾರ, ಮತ್ತು ಮುಂಬೈನಂತಹ ನಗರಗಳನ್ನೇ ಇವರು ಆಸ್ತಿ ಮಾಡುವುದಕ್ಕೆ ಆಯ್ಕೆ ಮಾಡಿಕೊಂಡಿದ್ದಾರಂತೆ. ಅದಷ್ಟೇ ಅಲ್ಲದೆ ಅವರಿಗೆ ಉದ್ಯಮ ಕಡೆಯೂ ಹೆಚ್ಚಿನ ಒಲವಿದೆ. ಪೆಟ್ರೋಲ್​ ಪಂಪ್​, ಶೋ ರೂಂ ಸೇರಿ ಕೆಲ ಉದ್ಯಮಗಳ ಕಡೆ ಆಸಕ್ತಿ ಇಟ್ಟುಕೊಂಡಿರುವುದಾಗಿ ತಿಳಿಸಲಾಗಿದೆ.

    ವರದಿಗಳ ಪ್ರಕಾರ ಭಾರತದ ರೈತನೊಬ್ಬನ ತಿಂಗಳ ಸರಾಸರಿ ಗಳಿಕೆ 6,400 ರೂಪಾಯಿ. ದೇಶದ 100ರಲ್ಲಿ 52 ರೈತರು ಸರಾಸರಿ 1,40,00 ರೂಪಾಯಿ ಸಾಲ ಹೊಂದಿದ್ದಾರೆ. 2019ರಲ್ಲಿ ಸುಮಾರು 10 ಸಾವಿರ ರೈತರು ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೇ. 76ರಷ್ಟು ರೈತರು ಕೃಷಿ ಬಿಟ್ಟು ಬೇರೆ ಉದ್ಯೋಗ ಮಾಡಲು ಬಯಸುತ್ತಾರೆ. ಹಳ್ಳಿಗಳಲ್ಲಿ ಕೇವಲ ಶೇ. 1 ಯುವಕರು ಕೃಷಿಯನ್ನು ಮುಂದುವರಿಸಲು ಬಯಸುತ್ತಾರೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್​)

    ‘ಜೈಲಲ್ಲಿ ನನ್ನ ರೇಪ್​ ಮಾಡಿದರು, ಕಿಸ್​ ಮಾಡೆಂದು ಹಿಂಸಿಸಿದರು!’ ಜೈಲುವಾಸದ ಅನುಭವ ಹಂಚಿಕೊಂಡ ಸಾಮಾಜಿಕ ಕಾರ್ಯಕರ್ತೆ

    ಹಿಮಾ ದಾಸ್​ ಈಗ ಉಪ ಪೊಲೀಸ್ ವರಿಷ್ಠಾಧಿಕಾರಿ! ಅಸ್ಸಾಂ ಸರ್ಕಾರದ ಮಹತ್ವದ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts