More

    ರಾಜ್ಯೋತ್ಸವ ಆಚರಣೆಗೆ ಸಿದ್ಧತೆ

    ಮುರಗೋಡ: ಸ್ಥಳೀಯ ನಾಡಕಚೇರಿ ಗ್ರಾಪಂ ಹಾಗೂ ವಿವಿಧ ಇಲಾಖೆಗಳು ಮತ್ತು ಕನ್ನಡಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 1ರಂದು ರಾಜ್ಯೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ ಕೈಗೊಳ್ಳಲಾಯಿತು.

    ಸ್ಥಳೀಯ ಗ್ರಾಪಂ ಹಳೆಯ ಕಟ್ಟಡದ ಸಭಾಭವನದಲ್ಲಿ ಈಚೆಗೆ ಏರ್ಪಡಿಸಿದ್ದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪತಹಸೀಲ್ದಾರ್ ಡಿ.ಬಿ.ಅಲ್ಲಯ್ಯನವರಮಠ, ರಾಜ್ಯೋತ್ಸವದಲ್ಲಿ ಸರ್ಕಾರಿ ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಬೇಕು. ಶಾಲಾ-ಕಾಲೇಜುಗಳು ರೂಪಕ ಸಿದ್ಧಪಡಿಸಬೇಕು. ಹೆಸ್ಕಾಂ ಸಿಬ್ಬಂದಿ ಮೆರವಣಿಗೆ ಸ್ಥಳಗಳಲ್ಲಿ ವಿದ್ಯುತ್ ತಂತಿ ಸರಿ ಪಡಿಸಬೇಕು. ರೂಪಕಗಳ ಮೆರವಣಿಗೆಗೆ ನೀಲಕಂಠ ಸ್ವಾಮೀಜಿ ಚಾಲನೆ ನೀಡುವರು ಎಂದರು.
    ಕರವೇ ತಾಲೂಕಾಧ್ಯಕ್ಷ ಉದಯಕುಮಾರ ಚಿಕ್ಕಣ್ಣವರ ಮಾತನಾಡಿ, ನಾಡು-ನುಡಿ ಜಲಕ್ಕಾಗಿ ಕನ್ನಡ ಸಂಘಟನೆಗಳು ಮಾಡುವ ಪ್ರತಿಭಟನೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಮೆರವಣಿಗೆ ಶ್ರೀಮಠದಿಂದ ಗ್ರಾಮದ ಪ್ರಮುಖ
    ಬೀದಿಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ಆಗಮಿಸುವುದು. ಉತ್ತಮ ರೂಪಕಗಳಿಗೆ ಪ್ರಥಮ, ದ್ವಿತೀಯ, ತೃತೀಯ
    ಬಹುಮಾನ ನೀಡಲಾಗುವುದು. ಡಿಸೆಂಬರ್‌ನಲ್ಲಿ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುಲಿವೆ ಎಂದು
    ತಿಳಿಸಿದರು.

    ಗ್ರಾಪಂ ಅಧ್ಯಕ್ಷೆ ಸಂಕೇತಾ ಹಟ್ಟಿಹೊಳಿ, ಉಪಾಧ್ಯಕ್ಷೆ ಮಹಾದೇವಿ ಮಂಬನೂರ, ಪಿಡಿಒ ಆರ್.ಎಲ್.ಬಾಗಿಲದ, ಕೃಷಿ ಅಧಿಕಾರಿ ನಾಗೇಶ ವಿರಕ್ತಮಠ, ಸಂಗಪ್ಪ ಬೆಳಗಾವಿ, ರಾಜು ಕಲಾಲ, ಪ್ರಕಾಶ ಹಟ್ಟಿಹೊಳಿ, ಗ್ರಾಪಂ ಸದಸ್ಯರು ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts