More

    ಪುರಾತನ ದೇವಸ್ಥಾನಗಳ ರಕ್ಷಣೆ ಕೈಂಕರ್ಯ

    ಬೆಳ್ತಂಗಡಿ: ಹೇರಳ ಹಣ ವೆಚ್ಚ ಮಾಡಿ ಹೊಸ ದೇವಸ್ಥಾನಗಳ ನಿರ್ಮಾಣಕ್ಕಿಂತ ಐತಿಹಾಸಿಕ ಹಿನ್ನೆಲೆಯ ಪುರಾತನ ದೇಗುಲಗಳ ರಕ್ಷಣೆಯ ಕಾರ್ಯ ಹೆಚ್ಚು ಮಹತ್ವಪೂರ್ಣವಾದದ್ದು ಎಂಬ ಆಶಯದೊಂದಿಗೆ 1991ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷರಾಗಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಪ್ರಾರಂಭಿಸಲಾಯಿತು.

    ರಾಜ್ಯದ 25 ಜಿಲ್ಲೆಗಳಲ್ಲಿ ಈವರೆಗೆ ಒಟ್ಟು 253 ದೇವಾಲಯಗಳು ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾರ್ಯಕ್ಕಾಗಿ 29.34 ಕೋಟಿ ರೂ. ವಿನಿಯೋಗಿಸಲಾಗಿದ್ದು, ಇದರಲ್ಲಿ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ 10.46 ಕೋಟಿ ರೂ, ಸರ್ಕಾರದ ವತಿಯಿಂದ 9 ಕೋಟಿ ರೂ, ದೇವಾಲಯ ಸಮಿತಿಯಿಂದ 9.88 ಕೋಟಿ ರೂ. ವಿನಿಯೋಗಿಸಲಾಗಿದೆ. ಸರ್ಕಾರದ ಸಹಭಾಗಿತ್ವದೊಂದಿಗೆ 176 ಸ್ಮಾರಕಗಳನ್ನು ಸಂರಕ್ಷಿಸಲಾಗಿದೆ. 2019- 20ರ ಸಾಲಿನಲ್ಲಿ 12 ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕಾಗಿ 176.5 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ.

    2003ರಿಂದ ರಾಜ್ಯ ಸರ್ಕಾರವೂ ಸ್ಮಾರಕಗಳ ಸಂರಕ್ಷಣಾ ಕಾರ್ಯದಲ್ಲಿ ಸಹಭಾಗಿತ್ವ ನೀಡುತ್ತಿದೆ. ಒಟ್ಟು ವೆಚ್ಚದಲ್ಲಿ ಶೇ.40 ಧರ್ಮೋತ್ಥಾನ ಟ್ರಸ್ಟ್, ಶೇ.40 ಕರ್ನಾಟಕ ಸರ್ಕಾರ ಹಾಗೂ ಶೇ.20 ದೇವಾಲಯದ ಸಮಿತಿ ಭರಿಸಬೇಕು. ಜೀರ್ಣೋದ್ಧಾರದ ಬಳಿಕ ದೇವಸ್ಥಾನದ ನಿರ್ವಹಣೆ ಆಯಾ ಊರಿನ ಸಮಿತಿಯವರಿಗೆ ಬಿಟ್ಟು ಕೊಡಲಾಗುತ್ತದೆ.

    ಧರ್ಮೋತ್ಥಾನ ಟ್ರಸ್ಟ್ ಆಡಳಿತ ಮಂಡಳಿ: ಧರ್ಮೋತ್ಥಾನ ಟ್ರಸ್ಟ್ ಆಡಳಿತ ಮಂಡಳಿ ಅಧ್ಯಕ್ಷರಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸದಸ್ಯರಾಗಿ ಹೇಮಾವತಿ ವಿ. ಹೆಗ್ಗಡೆ, ಡಿ.ಸುರೇಂದ್ರಕುಮಾರ್, ಡಿ.ಹಷೇರ್ಂದ್ರ ಕುಮಾರ್, ನಿರ್ದೇಶಕರಾಗಿ ನೇಮಿರಾಜ ಜೈನ್, ಕಾರ್ಯದರ್ಶಿಯಾಗಿ ಎ.ವಿ ಶೆಟ್ಟಿ, 12 ವರ್ಷಗಳಲ್ಲಿ ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ ಹರಿರಾಮಶೆಟ್ಟಿ ನಿರ್ದೇಶಕರಾಗಿ ಉತ್ತಮ ಸೇವೆ ನೀಡಿದ್ದಾರೆ. ಅವರ ಸ್ವಯಂ ನಿವೃತ್ತಿ ಬಳಿಕ ಪ್ರಸ್ತುತ ನೇಮಿರಾಜ್ ಜೈನ್ ನಿರ್ದೇಶಕರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts