More

    27ಕ್ಕೆ ರಾಜ್ಯೋತ್ಸವ ಪಟ್ಟಿ ಅಂತಿಮ : ನ.1ಕ್ಕೆ ಸಮಾರಂಭ ಖಚಿತ

    ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ರಾಜ್ಯ ಪ್ರಶಸ್ತಿಯ ಆಯ್ಕೆ ಪಟ್ಟಿ ಮಂಗಳವಾರ ಪ್ರಕಟವಾಗುವ ಸಾಧ್ಯತೆಗಳಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ ಒಂದರಂದೇ ನಡೆಸಲು ಸರ್ಕಾರ ತೀರ್ವನಿಸಿದೆ.

    ಈ ವರ್ಷ 65 ಜನರಿಗೆ ಪ್ರಶಸ್ತಿ ನೀಡಬೇಕಾಗಿತ್ತು. ಅಂತಿಮವಾಗಿ 80 ಜನರ ಆಯ್ಕೆಯಾಗಿದೆ. ಆ ಪಟ್ಟಿಯಲ್ಲಿ 15 ಹೆಸರುಗಳನ್ನು ತೆಗೆಯುವ ಕಸರತ್ತು ನಡೆದಿದೆ. ಮೈಸೂರು ದಸರಾ ಮುಗಿಸಿ ವಾಪಾಸು ಬಂದ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಸಭೆ ನಡೆಸಿ ಪಟ್ಟಿಯನ್ನು 65ಕ್ಕೆ ಇಳಿಸಿದ ನಂತರ ಪ್ರಕಟವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ಪ್ರಮುಖ ಪಂದ್ಯದಿಂದ ಹೊರಗುಳಿಯಲು ಕಾರಣವೇನು ಗೊತ್ತೇ?

    ಒಂದೆರಡು ಜಿಲ್ಲೆಗಳು ಹಾಗೂ ಎರಡು ಜಾತಿಗೆ ಹೆಚ್ಚಿನ ಪ್ರಶಸ್ತಿ ಹೋಗಿದ್ದು, ಅದನ್ನು ಕಡಿಮೆ ಮಾಡಬೇಕಾಗಿದೆ ಎಂದು ಮೂಲಗಳು ಹೇಳಿವೆ. ರವೀಂದ್ರ ಕಲಾಕ್ಷೇತ್ರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸರಳವಾಗಿ ಸಮಾರಂಭವನ್ನು ನಡೆಸಲು ನಿರ್ಧರಿಸಲಾಗಿದೆ. ಪ್ರಶಸ್ತಿ ವಿಜೇತರು ಹಾಗೂ ಅವರೊಂದಿಗೆ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

    ಮಿಲಿಟರಿ ಕ್ಯಾಂಟೀನ್​ನಲ್ಲಿ ಇನ್ನು ವಿದೇಶಿ ಮದ್ಯ ಸಿಗದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts