More

    ಖರ್ಗೆ ನಾಮಪತ್ರ- ಜೆಡಿಎಸ್​ ಬೆಂಬಲದ ವಿಚಾರದ ಕುರಿತು ನಾಯಕರು ಹೇಳಿದ್ದೇನು?

    ಬೆಂಗಳೂರು: ಇದೇ 16ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಾಳೆ ಅಂತಿಮ ದಿನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಇಂದು ನಾಮಪತ್ರ ಸಲ್ಲಿಸಿದರು.

    ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ‌ ಬಂದು ಬಿ ಫಾರಂ ಪಡೆದು. ಬಳಿಕ ವಿಧಾನಸೌಧಕ್ಕೆ ತೆರಳಿ ಅವರು ನಾಮಪತ್ರ ಸಲ್ಲಿಸಿದರು.

    ನಾಮಪತ್ರ ಸಲ್ಲಿಸುವ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸೇರಿದಂತೆ ಕೆಲವು ಗಣ್ಯರು ಹಾಜರಿದ್ದರು. ಸದಾಶಿವನಗರದಲ್ಲಿರುವ ಖರ್ಗೆ ಅವರ ನಿವಾಸಕ್ಕೆ ಹಲವಾರು ಗಣ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಕಾರ್ಯಕರ್ತರು ನಾಮಪತ್ರ ಸಲ್ಲಿಕೆಗೂ ಮುನ್ನ ಹೋಗಿ ಶುಭ ಕೋರಿದರು.

    ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ಅಚ್ಚರಿಯ ಆಯ್ಕೆ ಪ್ರಕಟಿಸಿದ ಬಿಜೆಪಿ: ಎಲ್ಲರಿಗೂ ಶಾಕ್​!

    ನಂತರ ಮಾತನಾಡಿದ ಸಿದ್ದರಾಮಯ್ಯ, ನಾಮಪತ್ರ ಸಲ್ಲಿಕೆಗೆ ಸಂಬಂಧಿಸಿದಂತೆ ಸಭೆ ಕರೆದಿದ್ದು, ಅದರಲ್ಲಿ ಎಲ್ಲಾ ಶಾಸಕರು ಮತ್ತು ಎಂಎಲ್​ಸಿಗಳು ಹಾಜರಿದ್ದರು. ಸರ್ವಾನುಮತದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿಸಿದ್ದೇವೆ. ಕಾಂಗ್ರೆಸ್​ ಎರಡನೇ ಅಭ್ಯರ್ಥಿ ಹಾಕುವುದಿಲ್ಲ ಎಂದರು.

    ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ವಿಚಾರವಾಗಿ ಇರುವ ವದಂತಿಗಳಿಗೆ ಉತ್ತರಿಸಿದ ಸಿದ್ದರಾಮಯ್ಯ, ಆ ಬಗ್ಗೆ ರಾಷ್ಟ್ರೀಯ ನಾಯಕರು ತೆಗೆದುಕೊಳ್ತಾರೆ. ಅದರಲ್ಲಿ ನಾವು ತಲೆ ಹಾಕುವುದಿಲ್ಲ ಎಂದು ಹೇಳಿಕೆ ನೀಡಿದರು.

    ಸಭೆಯ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ಅಧಿಕೃತ ರಾಜ್ಯಸಭಾ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಬಿ ಫಾರ್ಮ್ ಕೊಟ್ಟಿದ್ದೇವೆ, ನಮ್ಮದು ಜಾತ್ಯಾತೀತ ಪಕ್ಷ. ಯಾವುದೇ ಕಾರಣಕ್ಕೂ ಬಿಜೆಪಿಗೆ ಬೆಂಬಲ ಕೊಡುವುದಿಲ್ಲ, ಜೆಡಿಎಸ್​ಗೆ ಬೆಂಬಲದ ವಿಚಾರ ಹೈಕಮಾಂಡ್​ಗೆ ಬಿಟ್ಟದ್ದು. ಅವರು ಹೇಳಿದಂತೆ ಕೇಳುತ್ತೇವೆ ಎಂದರು.

    ಈ ಬಗ್ಗೆ ಸಭೆಯಲ್ಲಿ ಪಕ್ಷದ ಶಾಸಕರಿಗೆ ಕೆಲ ಸೂಚನೆಗಳನ್ನು ಕೊಟ್ಟಿದ್ದು, ಯಾರು ಕೂಡ ಯಾರ ಸಂಪರ್ಕದಲ್ಲೂ ಇರಬಾರದು, ಈ ಸಂದರ್ಭದಲ್ಲಿ ಯಾರೇ ಆಗಲಿ, ಬಿಜೆಪಿಯವರ ಜತೆ ಮಾತನಾಡಿದರೆ ಅದು ಬೇರೆ ಅರ್ಥವನ್ನೇ ಕಲ್ಪಿಸುವ ಕಾರಣ, ಈ ಸೂಚನೆ ನೀಡಲಾಗಿದೆ ಎಂದು ಶಿವಕುಮಾರ್​ ಹೇಳಿದರು.

    ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ಖರ್ಗೆ ಕಾಂಗ್ರೆಸ್ ಅಭ್ಯರ್ಥಿ: ಎಐಸಿಸಿ ಅಧಿಕೃತ ಘೋಷಣೆ

    ರಾಜ್ಯಸಭೆ ಟಿಕೆಟ್ ಕೈತಪ್ಪಿರುವ ವಿಚಾರವಾಗಿ ಮಾತನಾಡಿದ ಮಾಜಿ ಸಂಸದ ಮುದ್ದಹನುಮೇಗೌಡ, ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಹೈಕಮಾಂಡ್ ಸೂಚನೆ ನೀಡಿತ್ತು. ಅದರಂತೆ ಕ್ಷೇತ್ರ ಬಿಟ್ಟುಕೊಡಬೇಕಾಯಿತು. ರಾಜ್ಯಸಭಾ ಟಿಕೆಟ್ ನೀಡುವ ಭರವಸೆಯನ್ನ ಹೈಕಮಾಂಡ್ ನಾಯಕರು ನೀಡಿದ್ದರು. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ರಾಜಕೀಯದಲ್ಲಿ ಇಂತಹ ಏರಿಳಿತಗಳು ಸಹಜ. ಹೈಕಮಾಂಡ್ ತೀರ್ಮಾನವನ್ನು ಒಪ್ಪಿಕೊಳ್ಳಬೇಕಾಗುತ್ತೆ. ಆದರೂ ಪರಿಷತ್ ಸದಸ್ಯ ಸ್ಥಾನಕ್ಕಾದರೂ ನನ್ನನ್ನ ಪರಿಗಣಿಸುತ್ತಾರೆ.‌ಈ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ’ ಎಂದರು. ನಾನು ಕೂಡ ಪರಿಷತ್ ಸ್ಥಾನ ನೂರಕ್ಕೆ ನೂರು ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದೂ ಅವರು ಹೇಳಿದರು.

    ಅಮೆರಿಕ ಪ್ರತಿಭಟನೆಯಿಂದ ಹೊತ್ತಿ ಉರಿದ ಬಳಿಕ ಈ ಯುವಕನಿಗೆ ಗಿಫ್ಟ್​​ಗಳ ಸುರಿಮಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts