More

    ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಡಾ. ಪದ್ಮಾಮೂರ್ತಿ ಆಯ್ಕೆ

    ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಹಿರಿಯ ಸಂಗೀತ ಸಾಧಕರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ 2023-24ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಸಂಗೀತ ಸಾಧಕಿ ಡಾ. ಪದ್ಮಾಮೂರ್ತಿ ಭಾಜನರಾಗಿದ್ದಾರೆ.

    ಕ್ಲಾರಿಯೋನೆಟ್ ವಾದಕ ಡಾ. ಪಂಡಿತ್ ನರಸಿಂಹಲು ವಡವಾಟಿ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿ ಪುರಸ್ಕೃತರ ಆಯ್ಕೆ ಮಾಡಿದೆ. ಅರಮನೆಯ ಮುಖ್ಯ ವೇದಿಕೆಯಲ್ಲಿ ಅ. 15ರಂದು ನಡೆಯುವ ನಾಡಹಬ್ಬ ದಸರಾ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂ. ನಗದು, ಸರಸ್ವತಿ ವಿಗ್ರಹ, ಪ್ರಶಸ್ತಿ ಲಕ ಒಳಗೊಂಡಿರುತ್ತದೆ.

    ಪ್ರಶಸ್ತಿಗೆ ಭಾಜನರಾಗಿರುವ 91 ವರ್ಷದ ಡಾ. ಪದ್ಮಾ ಮೂರ್ತಿ ಅವರು, ಬಿ. ಎಸ್. ಸಿ., ಎಂ. ಎ., ಪಿ. ಹೆಚ್. ಡಿ., ಡಿ. ಲಿಟ್. ಪದವೀಧರರು. ಸಂಗೀತದಲ್ಲಿ ವಿದ್ವತ್, ಸೈಕಾಲಜಿ ಆಫ್ ಮ್ಯೂಸಿಕ್ ಎಂಬ ವಿಷಯಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪದವಿ ಪಡೆದವರು. ಆಕಾಶವಾಣಿ ಕಲಾವಿದೆ ಆಗಿದ್ದ ಇವರು ಲೇಖಕಿಯೂ ಹೌದು. ಮೈಸೂರು ವಾಸುದೇವಾಚಾರ್ಯ, ಟಿ. ಚೌಡಯ್ಯ, ಟಿ. ಪುಟ್ಟಸ್ವಾಮಯ್ಯನವರ ಬಳಿ ಸಂಗೀತಾಭ್ಯಾಸ ಮಾಡಿದ್ದು, ಎಚ್. ಎಸ್. ಕೃಷ್ಣಮೂರ್ತಿ, ಆರ್ . ಎಸ್. ಕೇಶವಮೂರ್ತಿಯವರ ಬಳಿ ವೀಣಾ ವಾದನ ಕಲಿತು ದೇಶ ವಿದೇಶಗಳ ವೇದಿಕೆಯಲ್ಲಿ ಸಂಗೀತ ಪ್ರಸ್ತುತ ಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts