More

    ಬಡವರ ಸಂಕಷ್ಟಕ್ಕೆ ಕೇಂದ್ರ ಸ್ಪಂದಿಸಲಿ

    ವಿಜಯವಾಣಿ ಸುದ್ದಿಜಾಲ ಯಾದಗಿರಿ
    ಮಹಾಮಾರಿ ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಕೂಲಿ ಕಾಮರ್ಿಕರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಅಬ್ದುಲ್ ರಜಾಕ್ ಆಗ್ರಹಿಸಿದರು.

    ಮಾಜಿ ಪ್ರಧಾನಿ ರಾಜೀವ್ಗಾಂಧಿ ಅವರ 29ನೇ ಪುಣ್ಯತಿಥಿ ನಿಮಿತ್ತ ಗುರುವಾರ ನಗರದ ವಿವಿಧೆಡೆ 29 ಕಾರ್ಮಿಕರಿಗೆ ಒಂದು ದಿನದ ಕೂಲಿ ಹಣ ನೀಡಿದ ಅವರು, ಕೇಂದ್ರ ಸಕರ್ಾರ ಬಡ ಕೂಲಿಕಾರರಿಗೆ ಆರು ತಿಂಗಳು 6000 ರೂ. ನೀಡಿ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

    ಮಾಜಿ ಎಂಎಲ್ಸಿ ಚೆನ್ನಾರಡ್ಡಿ ಪಾಟೀಲ್ ತನ್ನೂರು ಮಾತನಾಡಿ, ಕೇಂದ್ರ ಸಕರ್ಾರ ಬಡವರ ಬಗ್ಗೆ ಕಾಳಜಿ ವಹಿಸದೆ ಶ್ರೀಮಂತರಿಗೆ ಮಣೆ ಹಾಕುತ್ತಿದೆ. ಬಡವರ ಬಗ್ಗೆ ಕಾಳಜಿ ಇರುವಂತೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಲಾಕ್ಡೌನ್ನಿಂದ ಶ್ರೀಸಾಮಾನ್ಯ ಸಂಕಷ್ಟದಲ್ಲಿದ್ದು, ಸರ್ಕಾರದ 20 ಲಕ್ಷ ಕೋಟಿ ರೂ. ಯಾರಿಗೆ ನೀಡುತ್ತಿದೆ ಎಂಬ ಸ್ಪಷ್ಟತೆ ಇಲ್ಲ ಎಂದು ಆರೋಪಿಸಿದರು.

    ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಮಾನಸಗಲ್, ಎನ್ಐಸಿಯು ಜಿಲ್ಲಾಧ್ಯಕ್ಷ ಸಂಜಯಕುಮಾರ ಕೌವಲಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ ಸಹುಕಾರ, ಶಿವಕುಮಾರ ಕರದಳ್ಳಿ, ಅಭಿಷೇಕ ದಾಸನಕೇರಿ, ಕೃಷ್ಣಾ ದಾಸನಕೇರಿ, ಅಂಬರೀಶ ಜಾಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts