More

    ಕಾಡಿನಲ್ಲಿ ಪತ್ತೆಯಾದ ರಾಜಸ್ತಾನಿ ಮಹಿಳೆ

    ಮಡಿಕೇರಿ:

    ಸುಳ್ಯ ತಾಲೂಕಿನ ಕೂಜಿಮಲೆಯಲ್ಲಿ ಬುಧವಾರ ಪತ್ತೆಯಾಗಿದ್ದ ಅಪರಿಚಿತ ಮಹಿಳೆ ನಕ್ಸಲ್ ಗುಂಪಿಗೆ ಸೇರಿದವಳು ಅಲ್ಲ ಎಂದು ಕೊಡಗು ಜಿಲ್ಲಾ ಎಸ್‌ಪಿ ಕೆ. ರಾಮರಾಜನ್ ಸ್ಪಷ್ಟಪಡಿಸಿದ್ದಾರೆ. ಈಕೆ ರಾಜಸ್ತಾನ ಮೂಲದ ಅಸ್ವಸ್ಥ ಮಹಿಳೆಯಾಗಿದ್ದು, ಹಿಂದಿ ಭಾಷೆ ಮಾತನಾಡುತ್ತಾಳೆ. ಈಕೆಯನ್ನು ಪೊಲೀಸರು ವಶಪಡಿಸಿಕೊಂಡು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆಗೊಳಪಡಿಸಿದ ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಆಶ್ರಮಕ್ಕೆ ಸೇರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕೂಜಿಮಲೆ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡ ಮಹಿಳೆ ನಕ್ಸಲ್ ಎಂಬ ಸುದ್ದಿ ತಿಳಿದ ಕೂಡಲೇ ಎ ಎನ್ ಎಫ್ ಮತ್ತು ಕೊಡಗು ಜಿಲ್ಲಾ ಶಸಸ್ತ್ರ ಪಡೆಯ ಸಿಬ್ಬಂದಿ ಎಸ್ಟೇಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭ ಈ ಮಹಿಳೆ ಪತ್ತೆಯಾಗಿದ್ದಾಳೆ. ಬೆಳಗ್ಗಿನ ಜಾವ ೨ ಗಂಟೆ ತನಕ ನಡೆದ ಕಾರ್ಯಾಚರಣೆಯಲ್ಲಿ ಎಸ್‌ಪಿ ರಾಮರಾಜನ್ ಕೂಡ ಪಾಲ್ಗೊಂಡಿದ್ದರು. ರಾಜಸ್ತಾನ ಮೂಲದ ಮಹಿಳೆಯನ್ನು ಸಂಪೂರ್ಣ ವಿಚಾರಣೆಗೆ ಒಳಪಡಿಸಿದ ನಂತರ ಈ ಮಹಿಳೆ ನಕ್ಸಲ್ ತಂಡಕ್ಕೆ ಸೇರಿದವಳು ಅಲ್ಲ ಎಂದು ದೃಢಪಟ್ಟಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ಸುದ್ದಿಗಳು ಸುಳ್ಳಾಗಿದ್ದು ಕೊಡಗು ಜಿಲ್ಲಾ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ದಳ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts