More

    ವೈಜ್ಞಾನಿಕ ಚಿಂತನೆ ಅಳವಡಿಸಿಕೊಂಡು ಮೂಡನಂಬಿಕೆ ದೂರ ಮಾಡಿ; ವಿ.ಪಿ. ಲಿಂಗನಗೌಡ್ರ


    ರಾಣೆಬೆನ್ನೂರ: ವಿಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಮಕ್ಕಳು ವೈಜ್ಞಾನಿಕ ಚಿಂತೆನಗಳನ್ನು ಹೊಂದುವುದರ ಮೂಲಕ ಮೂಡನಂಬಿಕೆ ಹೊಗಲಾಡಿಸಬೇಕು ಎಂದು ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ವಿ.ಪಿ. ಲಿಂಗನಗೌಡ್ರ ಹೇಳಿದರು.
    ನಗರದ ಕೆ.ಎಲ್.ಇ. ಸಂಸ್ಥೆಯ ರಾಜ-ರಾಜೇಶ್ವರಿ ಹೆಣ್ಣುಮಕ್ಕಳ ಸಂಯುಕ್ತ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
    ವಿಜ್ಞಾನ ಕೇವಲ ವಸ್ತು ಪ್ರದರ್ಶನವಲ್ಲ, ಬದಲಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ, ಸೃಜನ ಶೀಲತೆಯನ್ನು ಬೆಳೆಸುವ ಒಂದು ಮಾರ್ಗ. ಬದಲಾವಣೆ ಜಗದ ನಿಯಮವಾಗಿದ್ದು, ವೈಜ್ಞಾನಿಕ ಮನೋಭಾವನೆ, ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ತಾಲೂಕಿನ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
    ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಒಟ್ಟು 36 ಮಾದರಿಗಳು ಪ್ರದರ್ಶನಗೊಂಡವು. ಜೈನ್ ಪಬ್ಲಿಕ್ ಶಾಲೆ ಪ್ರಥಮ ಸ್ಥಾನ, ಕರೂರ ಎಜುಎಷ್ಯಾಯಾ ಶಾಲೆ ದ್ವಿತೀಯ, ನಿಟ್ಟೂರಿನ ಬಿ.ಎ.ಜೆ.ಎಸ್.ಎಸ್. ಶಾಲೆ ತೃತೀಯ ಸ್ಥಾನ ಪಡೆದುಕೊಂಡವು.
    ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಬಿ.ಎಸ್. ಪಟ್ಟಣಶೆಟ್ಟಿ, ವೀರೇಶ ಅಂಗಡಿ, ಪ್ರಾಚಾರ್ಯ ಡಾ. ಎನ್.ಪಿ. ಮಾಗನೂರ, ಆರ್.ಜಿ. ಕುರವತ್ತಿ, ರಜನಿ ಲಿಂಗನಗೌಡ್ರ, ಎಸ್.ಆರ್. ಘಟ್ಟಿರೆಡ್ಡಿಹಾಳ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts