More

    ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ

    ಹಾವೇರಿ: ಜಿಲ್ಲಾದ್ಯಂತ ಮೂರು ದಿನಗಳಿಂದ ರಭಸವಾಗಿ ಸುರಿಯುತ್ತಿರುವ ಮಳೆಯ ಅಬ್ಬರ ಮಂಗಳವಾರವೂ ಜೋರಾಗಿತ್ತು. ವರುಣನ ಆರ್ಭಟಕ್ಕೆ ರೈತರು, ಸಾರ್ವಜನಿಕರು ಹೈರಾಣಾದರು.

    ಸೋಮವಾರ ಮಧ್ಯಾಹ್ನದಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಹಳ್ಳ, ಕೊಳ್ಳಗಳು ತುಂಬಿ ಹರಿದಿವೆ. ಸವಣೂರ ತಾಲೂಕಿನ ಕುರುಬರ ಮಲ್ಲೂರ ಗ್ರಾಮದ ಹಳ್ಳ ತುಂಬಿ ಸೇತುವೆ ಮೇಲೆ ಹರಿದಿದ್ದರಿಂದ ಗ್ರಾಮದ ಸಂಪರ್ಕ ಸ್ಥಗಿತಗೊಂಡಿತ್ತು. ಹಲವೆಡೆ ಹೊಲಗಳಲ್ಲಿ ನೀರು ನಿಂತಿದೆ. ಹಿಂಗಾರಿ ಬಿತ್ತನೆಗೆ ಅಡ್ಡಿಯಾಗಿದೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆ ಹಾಳಾಗುವ ಭೀತಿ ಎದುರಾಗಿದೆ. ಬುಧವಾರವೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮಳೆ ಪ್ರಮಾಣ ವಿವರ: ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗಿನವರೆಗೆ ವಿವಿಧ ಮಳೆಮಾಪನ ಕೇಂದ್ರಗಳ ವ್ಯಾಪ್ತಿಯ ಪೈಕಿ ಹಾವೇರಿ ಜಿಪಂ 18.0 ಮಿ.ಮೀ., ಎಪಿಎಂಸಿ 11.0 ಮಿ.ಮೀ., ಗುತ್ತಲ 45.6 ಮಿ.ಮೀ., ಹೊಸರಿತ್ತಿ 73.1 ಮಿ.ಮೀ., ರಾಣೆಬೆನ್ನೂರ 53.8 ಮಿ.ಮೀ., ಕುಪ್ಪೇಲೂರ 35.1 ಮಿ.ಮೀ., ಯಲವಗಿ 78.2 ಮಿ.ಮೀ., ತಡಸ 43.2 ಮಿ.ಮೀ, ಬಮ್ಮನಹಳ್ಳಿ 16.4 ಮಿ.ಮೀ. ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts