More

    ಬೆಳೆ ನಷ್ಟದ ಪರಿಹಾರ ಒದಗಿಸಲಿ

    ಕೊಪ್ಪಳ: ಜಿಲ್ಲೆ ಸೇರಿ ರಾಜ್ಯಾದ್ಯಂತ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಹಾಗಾಗಿ ಸರ್ಕಾರ ಬರ ಘೋಷಿಸಿ ರೈತರಿಗೆ ಪರಿಹಾರ ವಿತರಿಸಬೇಕೆಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಗೊಂದಿ ಒತ್ತಾಯಿಸಿದರು.

    ಜಿಲ್ಲೆಯಲ್ಲಿ ಶೇ.49ರಷ್ಟು ಮಳೆ ಕೊರತೆ

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಜಿಲ್ಲೆಯಲ್ಲಿ ಶೇ.49ರಷ್ಟು ಮಳೆ ಕೊರತೆ ಆಗಿದೆ. ಬಿತ್ತಿದ ಬೆಳೆ ತೇವಾಂಶವಿಲ್ಲದೇ ಒಣಗುತ್ತಿವೆ. ಹಾಗಾಗಿ ರೈತರು ಬೆಳೆ ನಾಶ ಮಾಡಲು ಮುಂದಾಗಿದ್ದಾರೆ. ಶೇ.40 ರಷ್ಟು ಬಿತ್ತನೆ ಆಗಿದ್ದರೂ ಬೆಳೆ ಸರಿಯಾಗಿ ಬೆಳೆದಿಲ್ಲ. ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಕೆಲ ತಾಲೂಕುಗಳಲ್ಲಿ ಈವರೆಗೆ ಮಳೆಯೇ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಮಳೆಗಾಲದಲ್ಲಿ ಹೆಚ್ಚಾಗುತ್ತೆ ಜಿಗಣೆಗಳ ಭೀತಿ..!; ರಕ್ತ ಹೀರುವ ಇವುಗಳನ್ನು ಓಡಿಸಲು ಈ 5 ಸಲಹೆಗಳನ್ನು ಪಾಲಿಸಿ…

    ಸರ್ಕಾರ ತಕ್ಷಣ ಅಧಿಕಾರಿಗಳ ಮೂಲಕ ವರದಿ ಪಡೆಯಬೇಕು. ಬರ ಘೋಷಣೆ ಮಾಡಿ, ಎಕರೆಗೆ 10 ಸಾವಿರ ರೂ.ನಂತೆ ಪರಿಹಾರ ಘೋಷಿಸಬೇಕು. ಇದರಿಂದ ರೈತರು ಕೃಷಿ ಚಟುವಟಿಕೆಗೆ ವ್ಯಯಿಸಿದ ಖರ್ಚಾದರೂ ಮರಳುತ್ತದೆ. ಹಿಂಗಾರು ಬಿತ್ತನೆಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎಂದರು. ಸಂಘದ ಪದಾಧಿಕಾರಿಗಳಾದ ಸೋಮಣ್ಣ ದಿನ್ನಿ, ಈಶ್ವರಪ್ಪ ದಿನ್ನಿ, ಪವನ ಕುಮಾರ್, ವಿಜಯ ಕುಮಾರ್ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts