More

    ಗಾಳಿ ಸಹಿತ ಧಾರಾಕಾರ ಮಳೆಗೆ ತರೀಕೆರೆಯಲ್ಲಿ 128 ವಿದ್ಯುತ್ ಕಂಬ, 150 ಮರಗಳು ನಾಶ

    ತರೀಕೆರೆ: ತಾಲೂಕಿನಲ್ಲಿ ಸೋಮವಾರ ಸಂಜೆ ಗಾಳಿ ಸಹಿತ ಧಾರಾಕಾರ ಮಳೆಗೆ ಲಕ್ಕವಳ್ಳಿ, ರಂಗೇನಹಳ್ಳಿ, ಬಾವಿಕೆರೆ, ಸಿದ್ಧರಹಳ್ಳಿ, ದುಗ್ಲಾಪುರ, ಮತ್ತಿತರ ಗ್ರಾಮಗಳಲ್ಲಿ 128ಕ್ಕೂ ಹೆಚ್ಚು ವಿದ್ಯುತ್ ಕಂಬ, 150 ಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ.

    ಗ್ರಾಮೀಣ ಶಾಖೆಯಲ್ಲಿ 38, ಪಟ್ಟಣ ಶಾಖೆ 8, ಹುಣಸಘಟ್ಟ ಶಾಖೆ 12 ಹಾಗೂ ಲಕ್ಕವಳ್ಳಿ ಶಾಖೆಯಲ್ಲಿ 70 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಧರೆಗುರುಳಿರುವ ವಿದ್ಯುತ್ ಕಂಬ ಮರುಅಳವಡಿಕೆ ಮಾಡಲು ಮೆಸ್ಕಾಂ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ಭಾಗದಲ್ಲಿ ಇನ್ನೂ ಎರಡು ದಿನ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮೂಲಗಳು ಖಚಿತಪಡಿಸಿವೆ.

    ಸಿದ್ಧರಹಳ್ಳಿ ಗ್ರಾಪಂ ವ್ಯಾಪ್ತಿಯ ದುಗ್ಲಾಪುರ, ಗ್ರಾಮದ ಅಡಕೆ ತೋಟಗಳಲ್ಲಿ್ಲ 2 ಸಾವಿರಕ್ಕೂ ಅಧಿಕ ಅಡಕೆ, 300ಕ್ಕೂ ಹೆಚ್ಚು ತೆಂಗಿನ ಮರ, ದೊಡ್ಡಕುಂದೂರು ಗ್ರಾಮದಲ್ಲಿ 2 ಎಕರೆ ಬಾಳೆ ನೆಲಕಚ್ಚಿವೆ. ಮಂಗಳವಾರ ಬೆಳೆ ಹಾನಿ ಪ್ರದೇಶಗಳಿಗೆ ಶಾಸಕ ಡಿ.ಎಸ್.ಸುರೇಶ್, ಉಪ ವಿಭಾಗಾಧಿಕಾರಿ ರೇಣುಕಾಪ್ರಸಾದ್, ತಹಸೀಲ್ದಾರ್ ಸಿ.ಜಿ.ಗೀತಾ ಮತ್ತು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಯತಿರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಬೆಳೆ ಹಾನಿಗೊಳಗಾದ ರೈತರಿಗೆ ಬೆಳೆ ಪರಿಹಾರ ನೀಡಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳುವಂತೆ ತಹಸೀಲ್ದಾರ್ ಸಿ.ಜಿ.ಗೀತಾ ಹಾಗೂ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಯತಿರಾಜ್​ಗೆ ಸೂಚನೆ ನೀಡಿದರು. ತಾಪಂ ಅಧ್ಯಕ್ಷೆ ಪದ್ಮಾವತಿ, ಸಿದ್ಧರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಶಶಿಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರಾದ ಗಿರೀಶ್, ಪ್ರದೀಪ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts