More

    ಜಲಮೂಲಗಳ ಸಮೃದ್ಧಿಗೆ ಮಳೆ ನಿರೀಕ್ಷೆ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ಬೇಸಿಗೆಯ ಬಳಿಕ ಮುಂಗಾರು ಅವದಿಯ ಪ್ರಾರಂಭದಲ್ಲಿ ಮಳೆಯ ಅಭಾವದಿಂದ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.
    ಹೌದು! ಕಳೆದ ವರ್ಷ ಧಾರಾಕಾರ ಮಳೆಗೆ ಬಹುತೇಕ ಕೆರೆಗಳು, ಜಲಾಶಯಗಳು ಭರ್ತಿಯಾಗಿದ್ದವು. ಅಂತರ್ಜಲ ಮಟ್ಟ ಹೆಚ್ಚಳವಾಗಿ ಹಾಹಾಕಾರದ ಸಮಸ್ಯೆ ಕಾಡಲಿಲ್ಲ. ಮತ್ತೆ ಇದೇ ವಾತಾವರಣ ನಿರ್ಮಾಣಕ್ಕೆ ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಬೇಕಾಗಿದೆ. ಇಲ್ಲದಿದ್ದಲ್ಲಿ ನಾನಾ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ಜಕ್ಕಲಮಡಗು ಜಲಾಶಯ, ಬಾಗೇಪಲ್ಲಿ ಪಟ್ಟಣ ಮತ್ತು ತಾಲೂಕಿನ ವಿವಿಧ ಗ್ರಾಮಗಳಿಗೆ ಚಿತ್ರಾವತಿ, ವಂಡಮಾನ್ ಜಲಾಶಯ, ಚಿಂತಾಮಣಿ ನಗರಕ್ಕೆ ಕನ್ನಂಪಲ್ಲಿ ಕೆರೆ ಜಲಾಶಯವು ಕುಡಿಯುವ ನೀರಿನ ಮೂಲಗಳಾಗಿವೆ. ಇವು ಹಲವು ತಿಂಗಳ ಹಿಂದೆ ನೀರಿನಿಂದ ತುಂಬಿ ತುಳುಕಾಡುತ್ತಿದ್ದವು. ಬೇಸಿಗೆಯ ಬಳಿಕ ನೀರಿನ ಸಂಗ್ರಹ ಪ್ರಮಾಣ ತುಂಬಾ ಕಡಿಮೆಯಾಗಿದೆ.
    ಪ್ರಸಕ್ತ ಸಾಲಿನಲ್ಲಿ ಮುಂಗಾರು ಅವಧಿಗೆ ವಾಡಿಕೆ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಇದರ ನಡುವೆ ಕಳೆದ ಒಂದು ತಿಂಗಳಲ್ಲಿ ಶೇ.97 ರಷ್ಟು ಮಳೆ ವ್ಯತ್ಯಾಸ ಕಂಡು ಬಂದಿದೆ. ಆಗಾಗ ಮೋಡ ಮುಸುಕಿದ ವಾತಾವರಣ, ತುಂತುರು ಹನಿಗಳ ಸಿಂಚನ, ಜೋರುಗಾಳಿಯನ್ನು ಹೊರತುಪಡಿಸಿದರೆ ಉತ್ತಮ ಮಳೆಯಂತೂ ಬಿದ್ದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts