More

    ಮಳೆಗಾಗಿ ಪ್ರಾರ್ಥಿಸಿ ಚಳ್ಳಕೆರೆಯಲ್ಲಿ ಹೋಳಿಗೆಮ್ಮ ಹಬ್ಬ ಆಚರಣೆ

    ಚಳ್ಳಕೆರೆ: ಮಳೆಗಾಗಿ ಪ್ರಾರ್ಥಿಸಿ ನಗರದ ವಿವಿಧ ವಾರ್ಡ್‌ಗಳಲ್ಲಿ ಮಂಗಳವಾರ ಹೋಳಿಗೆಮ್ಮ ಹಬ್ಬ ಆಚರಿಸಿ, ಮೆರವಣಿಗೆ ಮೂಲಕ ನಗರ ಗಡಿಭಾಗದಲ್ಲಿ ವಿಸರ್ಜನೆ ಮಾಡಲಾಯಿತು.

    ಇಲ್ಲಿನ ಮದಕರಿನಗರ, ಗಾಂಧಿನಗರ, ಚಿತ್ರಯ್ಯನಹಟ್ಟಿ, ಕಾಟಪ್ಪನಹಟ್ಟಿ ಮತ್ತಿತರ ವಾರ್ಡ್‌ಗಳು ಸೇರಿದಂತೆ ಕೆಲ ಗ್ರಾಮೀಣ ಭಾಗದಲ್ಲೂ ಭಕ್ತಿಯಿಂದ ಹೋಳಿಗೆಮ್ಮ ಹಬ್ಬ ಆಚರಿಸಿ ಸಮೃದ್ಧಿ ಮಳೆ ಆಗಲೆಂದು ಪ್ರಾರ್ಥನೆ ಮಾಡಲಾಯಿತು.

    ಮದಕರಿ ನಗರದಲ್ಲಿ ಮಣ್ಣಿನಿಂದ ಹೋಳಿಗೆಮ್ಮ ದೇವಿಯ ಮೂರ್ತಿ ಸಿದ್ಧಪಡಿಸಿ, ಹೊಸ ಬಟ್ಟೆ, ಉಡುಗೆ, ಹಸಿರು ಬಳೆ, ಅರಿಶಿನ- ಕುಂಕುಮದಿಂದ ಅಲಂಕಾರ ಮಾಡಿ ಬಿದಿರು ಬುಟ್ಟಿಯಲ್ಲಿಟ್ಟು ಕಟ್ಟೆಯ ಮೇಲೆ ಇಡಲಾಗಿತ್ತು.

    ಪ್ರತಿ ಮನೆಗಳಲ್ಲಿ ತಯಾರಿಸಿದ್ದ ಹೋಳಿಗೆ ತಂದು ಎಲೆ ಹಾಕಿ ಎಡೆ ಇಟ್ಟು ಹಣ್ಣು, ಕಾಯಿ, ಬಾಳೆಹಣ್ಣು ಸಮರ್ಪಿಸಿ ಪೂಜೆ ಮಾಡಲಾಯಿತು. ಬಳಿಕ ದೇವಿ ಮೂರ್ತಿ ಹೊತ್ತುಕೊಂಡು ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ ನಗರದ ಗಡಿಭಾಗದಲ್ಲಿ ವಿಸರ್ಜನೆ ಮಾಡಲಾಯಿತು.

    ಮೆರವಣಿಗೆಯಲ್ಲಿ ಹನುಮಂತರಾಯ, ನವೀನ, ವಿನಯ, ಮಂಜಣ್ಣ, ತಿಪ್ಪೇಸ್ವಾಮಿ, ಶಿವಣ್ಣ, ಬೋರಯ್ಯ, ಚೇತನ್, ರಾಜು ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts