More

    ವಾಡಿಕೆ ತಲುಪದ ಮುಂಗಾರು ಮಳೆ

    ದ.ಕ ಶೇ.31, ಉಡುಪಿ ಶೇ.19 ಮಳೆ ಕೊರತೆ, ಜೂನ್‌ನಂತೆ ಜುಲೈಯಲ್ಲೂ ಮಳೆ ಕಡಿಮೆ

    ಭರತ್ ಶೆಟ್ಟಿಗಾರ್, ಮಂಗಳೂರು

    ಜುಲೈ ತಿಂಗಳಲ್ಲಿ ಕರಾವಳಿಯಲ್ಲಿ ಭಾರಿ ಮಳೆ ಸುರಿದು, ವಿವಿಧೆಡೆ ಪ್ರವಾಹ, ನೆರೆ ಪರಿಸ್ಥಿತಿ ಉಂಟಾಗಿತ್ತು. ಒಟ್ಟು ಮಳೆ ಪ್ರಮಾಣ ಗಮನಿಸಿದರೆ, ಇಲ್ಲಿಯವರೆಗೆ ಸುರಿದ ಮಳೆ ವಾಡಿಕೆಗಿಂತ ಕಡಿಮೆ ಎಂದು ಇಲಾಖಾ ವರದಿ ತಿಳಿಸುತ್ತದೆ. ಜೂನ್ 1ರಿಂದ ಇಲ್ಲಿಯ ವರೆಗಿನ ಮಳೆಯ ಅಂಕಿಅಂಶ ಪ್ರಕಾರ ದ.ಕ ಜಿಲ್ಲೆಯಲ್ಲಿ ಶೇ.32 ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ.20ರಷ್ಟು ಮಳೆ ಕೊರತೆ ಇದೆ.

    ಜೂನ್‌ನಿಂದ ಆಗಸ್ಟ್ 5ರವರೆಗೆ ದ.ಕ ಜಿಲ್ಲೆಯಲ್ಲಿ 16.05 ಸೆಂ.ಮೀ.ಮಳೆ ಸುರಿದಿದ್ದು, ಈ ಅವಧಿಯ ವಾಡಿಕೆ ಮಳೆ 23.47 ಸೆಂ.ಮೀ. ಇದೇ ವೇಳೆ ಉಡುಪಿಯಲ್ಲಿ 27.66 ಸೆಂ.ಮೀ.ಮಳೆಯಾಗಿದೆ.

    ಮಾಸಿಕ ಮಳೆಯೂ ಕಡಿಮೆ: ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದಿವೆ. ತಿಂಗಳ ಮಾಸಿಕ ಮಳೆ ಲೆಕ್ಕಾಚಾರದಲ್ಲೂ ವಾಡಿಕೆಗಿಂತ ಕಡಿಮೆಯೇ ಸುರಿದಿದೆ. ಜೂನ್ ತಿಂಗಳಲ್ಲಿ ದ.ಕ ಜಿಲ್ಲೆಯಲ್ಲಿ 6.36 ಸೆಂ.ಮೀ. ಮಳೆಯಾಗಿದ್ದು (ವಾಡಿಕೆ 9.27 ಸೆಂ.ಮೀ.) ಅಂದರೆ ಶೇ.31ರಷ್ಟು ಕಡಿಮೆ. ಉಡುಪಿ ಜಿಲ್ಲೆಯಲ್ಲಿ ವಾಡಿಕೆ ಮಳೆ 11.05 ಸೆಂ.ಮೀ.ನಷ್ಟು ಸುರಿಯಬೇಕಾದಲ್ಲಿ 8.72 ಸೆಂ.ಮೀ.ಮಾತ್ರ ಮಳೆ ಸುರಿದು, ಶೇ.21ರಷ್ಟು ಕೊರತೆಯಾಗಿದೆ. ಜುಲೈ ತಿಂಗಳ ಮಳೆ ಅಂಕಿ ಅಂಶದ ಪ್ರಕಾರ ದ.ಕ ಜಿಲ್ಲೆಯಲ್ಲಿ ವಾಡಿಕೆ ಮಳೆ 12.32 ಸೆಂ.ಮೀ.ನಲ್ಲಿ 8.80 ಸೆಂ.ಮೀ.ಮಳೆಯಾಗಿದ್ದು, ಶೇ.29ರಷ್ಟು ಕೊರತೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 14.48 ಸೆಂ.ಮೀ. ವಾಡಿಕೆ ಮಳೆಯಲ್ಲಿ 11.99 ಸೆಂ.ಮೀ.ಮಳೆ ಸುರಿದಿದ್ದು, ಶೇ.17ರಷ್ಟು ಕೊರತೆ ಉಂಟಾಗಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಯಷ್ಟೇ ಮಳೆ: ಕರಾವಳಿಯ ಮೂರು ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ವಾಡಿಕೆಗೆ ಸಮನಾಗಿ ಮಳೆ ಸುರಿದಿದೆ. ಇಲ್ಲಿಯವರೆಗಿನ ವಾಡಿಕೆ ಮಳೆ 18.34 ಸೆಂ.ಮೀ. 18.37 ಸೆಂ.ಮೀ.ಮಳೆಯಾಗಿದ್ದು, ಕೆಲವು ಮಿ.ಮೀ.ಹೆಚ್ಚು ಮಳೆ ಬಿದ್ದಿದೆ. ಜೂನ್ ತಿಂಗಳಲ್ಲಿ 7.31 ಸೆಂ.ಮೀ.ಮಳೆಯಾಗುವ ಮೂಲಕ ವಾಡಿಕೆ 6.91 ಸೆಂ.ಮೀ.ಗಿಂತ ಶೇ.6ರಷ್ಟು ಮಳೆ ಹೆಚ್ಚಾಗಿದೆ. ಜುಲೈ ತಿಂಗಳಲ್ಲಿ ಸುರಿಯಬೇಕಾಗಿದ್ದ ವಾಡಿಕೆ ಮಳೆ 9.93 ಸೆಂ.ಮೀ, ಆದರೆ 9.95 ಸೆಂ.ಮೀ. ಸುರಿದು ಕೆಲವು ಸೆಂ.ಮೀ.ಹೆಚ್ಚಾಗಿದೆ.

    ಕರಾವಳಿಯಲ್ಲಿ ಸದ್ಯ ಮುಂಗಾರು ಬಲ ಪಡೆಯುತ್ತಿದೆ. ವ್ಯಾಪಕವಾಗಿ ಅಲ್ಲಲ್ಲಿ ಮಳೆಯ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಮಳೆಯಾಗಲಿದ್ದು, ವಾಡಿಕೆಗಿಂತ ಹೆಚ್ಚು ಮಳೆ ನಿರೀಕ್ಷಿಸುವಂತಿಲ್ಲ.
    ಸಿ.ಎಸ್.ಪಾಟೀಲ್ ವಿಜ್ಞಾನಿ, ಬೆಂಗಳೂರು ಹವಾಮಾನ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts