More

    9ರಿಂದ ರಾಜ್ಯದ ಹಲವೆಡೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮೂನ್ಸೂಚನೆ

    ಬೆಂಗಳೂರು: ರಾಜ್ಯದ ಹಲವೆಡೆ ಡಿ.9ರಿಂದ ಮುಂದಿನ ಮೂರ‌್ನಾಲ್ಕು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

    ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ತುಮಕೂರು, ವಿಜಯನಗರ, ಬಳ್ಳಾರಿಯಲ್ಲಿ ಡಿ.9ರಿಂದ ಡಿ.12ರವರೆಗೆ ಹಾಗೂ ಬೆಳಗಾವಿ, ಗದಗ, ಕೊಪ್ಪಳದಲ್ಲಿ ಮುಂದಿನ ಮೂರು ದಿನ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

    ಇದನ್ನೂ ಓದಿ: ದಲಿತರು ಬುದ್ಧನನ್ನು ಆರಾಧಿಸುವುದು ಅಗತ್ಯ: ಜಯನ್​ ಮಲ್ಪೆ

    ‘ಮೈಚಾಂಗ್’ ಚಂಡಮಾರುತ ಪರಿಣಾಮ ರಾಜ್ಯದಲ್ಲಿ 2-3 ದಿನ ಥಂಡಿ ವಾತಾವರಣದ ಜತೆ ಜಿಟಿಜಿಟಿ ಮಳೆಯಾಗಿತ್ತು. ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲೂ ಉಷ್ಣಾಂಶ ಇಳಿಮುಖವಾಗಿತ್ತು. ಬುಧವಾರದಿಂದ ಒಣಹವೆ ಕಾಣಿಸಿಕೊಂಡಿದ್ದು, ಡಿ.8ರವರೆಗೆ ಇದೇ ರೀತಿ ವಾತಾವರಣ ಇರುತ್ತದೆ. ಡಿ.9ರಿಂದ ಡಿ.12ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ನಂತರ, ಮಳೆ ಕುಂಠಿತವಾಗಲಿದೆ. ಡಿ.13ರಿಂದ ಒಹಣಹವೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts