More

    ಬೆಳ್ತಂಗಡಿಯಲ್ಲಿ ತೋಟ, ಗದ್ದೆ ಜಲಾವೃತ

    ಬೆಳ್ತಂಗಡಿ: ತಾಲೂಕಾದ್ಯಂತ ಸೋಮವಾರ ಸಾಯಂಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ.

    ಬೆಳಗ್ಗೆ ಬಿಸಿಲಿನ ವಾತಾವರಣದಿಂದ ಕೂಡಿತ್ತು. ಸಂಜೆ ಬಳಿಕ ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ, ಮುಂಡಾಜೆ, ದಿಡುಪೆ, ಕುಕ್ಕಾವು, ಮಿತ್ತಬಾಗಿಲು, ಚಾರ್ಮಾಡಿ ಪ್ರದೇಶದಲ್ಲಿ ಮಳೆಯಾಯಿತು. ದಿಡುಪೆ ಏಳುವರೆ ಹಳ್ಳ, ನೇತ್ರಾವತಿ, ಮೃತ್ಯುಂಜಯ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಕೆಲವೆಡೆ ಗದ್ದೆ, ತೋಟಗಳಿಗೆ ನೀರು ನುಗ್ಗಿದೆ. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್, ಅಂತರ್ಜಾಲ ವ್ಯತ್ಯಯವಾಗಿತ್ತು. ಪುತ್ತೂರು, ಉಪ್ಪಿನಂಗಡಿಯ ಅಲ್ಲಲ್ಲಿ ಮಳೆಯಬ್ಬರ ಜೋರಾಗಿತ್ತು. ಸುಬ್ರಹ್ಮಣ್ಯದಲ್ಲಿ ಮಧ್ಯಾಹ್ನ ಬಳಿಕ ನಿರಂತರ ಮಳೆ ಸುರಿದಿದೆ. ಮಂಗಳೂರು ನಗರ ಆಸುಪಾಸಿನಲ್ಲಿ ರಾತ್ರಿ ವೇಳೆಯಲ್ಲಿ ಗುಡುಗು-ಮಿಂಚಿನೊಂದಿಗೆ ಮಳೆ ಸುರಿದಿದೆ. ಹಗಲು ವೇಳೆ ಮೋಡ ಮುಸುಕಿನ ಆಕಾಶ, ಬಿಸಿಲ ವಾತಾವರಣವಿತ್ತು.

    ಕರಾವಳಿಯಲ್ಲಿ ಮುಂದಿನ ಐದು ದಿನ ಯೆಲ್ಲೋ ಅಲರ್ಟ್ ಇದ್ದು, ಮಳೆ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪೂರ್ವ ಕರಾವಳಿಯಲ್ಲಿ ನಿರಂತರವಾಗಿ ವಾಯುಭಾರ ಕುಸಿತವಾಗುತ್ತಿರುವುದರಿಂದ ಮಳೆಯೂ ನಿರಂತರವಾಗಿ ಸುರಿಯುತ್ತಿದೆ. ಸೋಮವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬೆಳ್ತಂಗಡಿ 16 ಮಿ.ಮೀ., ಬಂಟ್ವಾಳ 23, ಮಂಗಳೂರು 8, ಪುತ್ತೂರು 19, ಸುಳ್ಯ 14, ಮೂಡುಬಿದಿರೆ 7 ಮತ್ತು ಕಡಬದಲ್ಲಿ ಅತ್ಯಧಿಕ 42 ಮಿ.ಮೀ.ಸಹಿತ ಸರಾಸರಿ 19 ಮಿ.ಮೀ. ಮಳೆ ಸುರಿದಿದೆ.ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 29.6 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 23.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts