More

    ರಾಜ್ಯದಲ್ಲಿ ಚಳಿ ಮಧ್ಯೆ 4 ದಿನ ಮಳೆ..ಯಾವ ಜಿಲ್ಲೆಗಳಲ್ಲಿ ಅಧಿಕ ವರ್ಷಧಾರೆಯಾಗಲಿದೆ?

    ಬೆಂಗಳೂರು: ರಾಜ್ಯದಲ್ಲಿ ಮಂಜಿನ ಜತೆಗೆ ಮೈ ಕೊರೆಯುವ ಚಳಿ ಜನರನ್ನು ಹೈರಾಣ ಮಾಡುತ್ತಿದೆ. ಇದರ ಮಧ್ಯೆ ಕ್ರೈಸ್ತವರ್ಷಾರಂಭದೊಂದಿಗೆ(ಜ.1ರಿಂದ) ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಇದನ್ನೂ ಓದಿ: ಚಲಿಸುವ ಕಾರಿನ ಮೇಲೆ ಮಲಗಿದ ಮಕ್ಕಳು.. ವಿಡಿಯೋ ವೈರಲ್

    ಕಳೆದ ವಾರದಿಂದ ದಟ್ಟ ಮಂಜು ಸುರಿಯುತ್ತಿದೆ. ಇದರ ಜತೆಗೆ ಮೈ ನಡುಗಿಸುವ ಚಳಿ ಸೃಷ್ಟಿಯಾಗುತ್ತಿದೆ. ಕರಾವಳಿಗಿಂತಲೂ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ಇಳಿಕೆಯಾಗಿ ಅತೀವ ಚಳಿ ದಾಖಲಾಗಿದೆ.ಇದೀಗ ಚಳಿ ಜತೆಗೆ ಜ.1ರಿಂದ 4ರವರಗೆ ಹಗುರದಿಂದ ಸಾಧಾರಣ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಇಡೀ ರಾಜ್ಯದಲ್ಲಿ ಮುಂಜಾನೆ ದಟ್ಟ ಮಂಜು ಆವರಿಸಲಿದೆ. ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆ ಮಬ್ಬು ಮುಸುಕಲಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಾಲ್ಕು ದಿನ ಹಗುರದಿಂದ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಇದೇ ಅವಧಿಯಲ್ಲಿ ಚಾಮರಾಜನಗರ, ಚಿಕ್ಕಮಳೂರು, ದಾವಣಗೆರೆ, ಕೊಡಗು, ಹಾಸನ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಹಗುರದಿಂದ ಸಾಧಾರಣ ಮಳೆ ಸಂಭವವಿದೆ.

    ಚಳಿ ಹೆಚ್ಚು: ಇದೇ ವೇಳೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬೆಳಗ್ಗೆ ದಟ್ಟ ಮಂಜು, ಮೋಡ ಕವಿದ ವಾತಾವರಣ ಕಂಡು ಬರಲಿದೆ. ಮಧ್ಯಾಹ್ನ ಗರಿಷ್ಠ ತಾಪಮಾನ ದಾಖಲಾಗಲಿದ್ದು, ಇಂತಹ ಕಡೆ ಶುಷ್ಕ ವಾತಾವರಣವೇ ಮುಂದುವರಿಯಲಿದೆ.

    ಇನ್ನು ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಎಲ್ಲಿಯೂ ಮಳೆಯಾಗಿಲ್ಲ. ರಾಜ್ಯದ ಕನಿಷ್ಠ ತಾಪಮಾನ ವಿಜಯಪುರದಲ್ಲಿ 10.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಉಳಿದಂತೆ ಧಾರವಾಡದಲ್ಲಿ 11,4 ಡಿಸೆ, ಹಾವೇರಿ, ಗದಗ, ಬಾಗಲಕೋಟೆ ಜಿಲ್ಲೆಯಲ್ಲಿ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ಕಾರವಾರ-ಹೊನ್ನಾರದಲ್ಲಿ ರಾಜ್ಯದ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಪಣಂಬೂರಿನಲ್ಲಿ 35, ಮಂಗಳೂರು ವಿಮಾನ ನಿಲ್ದಾಣದಲ್ಲಿ 33.8 ಡಿಗ್ರಿ ಸೆಲ್ಸಿಯಸ್, ಕಲಬುರಗಿ ಮತ್ತು ಚಾಮರಾಜನಗರದಲ್ಲಿ 32 ಗರಿಷ್ಠ ತಾಪಮಾನ ದಾಖಲಾಗಿದೆ. ಇದನ್ನು ಹೊರತುಪಡಿಸಿ ರಾಜ್ಯದಲ್ಲಿ ವಾತಾವರಣದಲ್ಲಿ ತೀವ್ರ ತೆರನಾದ ಬದಲಾವಣೆ ಇಉವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮ್ಯಾಂಚೆಸ್ಟರ್‌ಗೆ ತೆರಳುತಿದ್ದ ವಿಮಾನ ಬರ್ಮುಡಾದಲ್ಲಿ ಹಠಾತ್​ ಭೂಸ್ಪರ್ಷ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts