More

    ಕೊಪ್ಪಳದಲ್ಲಿ ಮುಂದುವರಿದ ಮಳೆ
    ಶಾಲೆಗಳಿಗೆ ರಜೆ ಘೋಷಣೆ

    ಕೊಪ್ಪಳ: ಜಿಲ್ಲೆಯಲ್ಲಿ ಇಂದು ಬೆಳಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ‌. ಕೊಪ್ಪಳ ತಾಲೂಕಿನಲ್ಲಿ ಮಳೆ ಅಬ್ಬರ ಹೆಚ್ಚಿದ ಕಾರಣ ಶಾಲೆಗಳಿಗೆ ರಜೆ ಘೋಷಿಸಿ ಡಿಸಿ ಎಂ.ಸುಂದರೇಶ ಬಾಬು ಆದೇಶಿಸಿದ್ದಾರೆ.


    ಕಳೆದೆರೆಡು ದಿನದಿಂದ ಆಗಾಗ ಮಳೆಯಾಗುತ್ತಿದೆ‌. ಇಂದು ಬೆಳಗ್ಗೆ 6 ರಿಂದ ಸತತ ಮಲಕೆ ಸುರಿಯುತ್ತಿದೆ. ಹೀಗಾಗಿ ಶಾಲಾ ಕಾಲೇಜುಗಳಿಗೆ ತೆರಳಲು ತೊಂದರೆ ಉಂಟಾದ ಕಾರಣ ಜಿಲ್ಲಾ ಕೇಂದ್ರ ಕೊಪ್ಪಳ ತಾಲೂಕಿನಲ್ಲಿ  ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉಳಿದ ತಾಲೂಕುಗಳಲ್ಲಿ ಮಳೆ ಪರಿಸ್ಥಿತಿಯನ್ನು ನೋಡಿಕೊಂಡು ಸ್ಥಳೀಯವಾಗಿ ರಜೆ ಘೋಷಣೆ ಮಾಡುವಂತೆ ಆಯಾ ಬಿಇಒಗಳಿಗೆ ಸೂಚನೆ ನೀಡಲಾಗಿದೆ.


    ಶೈಕ್ಷಣಿಕ ನಷ್ಟವನ್ನು ಮುಂದೆ ರಜಾ ದಿನದಲ್ಲಿ ಸರಿದೂಗಿಸುವಂತೆ ತಿಳಿಸಲಾಗಿದೆ. ಸಿಡಿಪಿಒಗಳು ತಮ್ಮ ತಾಲೂಕಿನಲ್ಲಿ ಮಳೆ ಪರಿಸ್ಥಿತಿ ಅವಲೋಕಿಸಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಅಂಗನವಾಡಿಗಳಿಗೆ ರಜೆ ನೀಡುವಂತೆ ನಿರ್ದೇಶಿಸಲಾಗಿದೆ.


    ತಾಲೂಕಿನ ಕೋಳೂರು ಸೇರಿ ಇತರ ಭಾಗಗಳಲ್ಲಿ ವರುಣಾರ್ಭಟಕ್ಕೆ ಮೆಕ್ಕೆಜೋಳ, ಹತ್ತಿ ಸೇರಿ ಇತರ ಬೆಳೆಗಳು ಜಲಾವೃತವಾಗಿವೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ‌. ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಚರಂಡಿಗಳು ತುಂಬಿ ರಸ್ತೆಗೆ ನೀರು ಹರಿಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts