More

    ಪತ್ತೆಯಾಗದ ಹಳ್ಳದಲ್ಲಿ ಕೊಚ್ಚಿಹೋದ ಯುವಕ

    ಬಸವಕಲ್ಯಾಣ: ಭಾರಿ ಮಳೆಯಿಂದ ಸೋಮವಾರ ಸಂಜೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ೨೪ ಗಂಟೆಯಾದರೂ ಪತ್ತೆಯಾಗಿಲ್ಲ. ಕತ್ತಲೆಯಲ್ಲೂ ಯುವಕನ ಪತ್ತೆ ಕಾರ್ಯ ಮುಂದುವರಿದಿದೆ.
    ಧನ್ನೂರ (ಆರ್) ಗ್ರಾಮದ ಮಲ್ಲಪ್ಪ ಕರೆಪನೋರ್ (೨೫) ನೀರಿನಲ್ಲಿ ಕೊಚ್ಚಿಕೊಂಡು ಹೋದ ಯುವಕ. ಗ್ರಾಮದ ಹೊರವಲಯದ ಹೊಲದಲ್ಲಿ ಇರುವ ತನ್ನ ಮನೆಗೆ ಹೋಗುವಾಗ ಅವಘಡ ಸಂಭವಿಸಿದೆ.
    ರಾತ್ರಿ ಮಳೆ ಮತ್ತು ಕತ್ತಲೆಯಿಂದ ಪತ್ತೆ ಕಾರ್ಯಕ್ಕೆ ತೊಡಕಾಗಿದೆ. ಮಂಗಳವಾರ ಬೆಳಗ್ಗೆಯಿಂದ ಬಸವಕಲ್ಯಾಣ, ಹುಮನಾಬಾದ್ ಅಗ್ನಿ ಶಾಮಕದಳ, ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಯುವಕನ ಶೋಧ ಮುಂದುವರಿಸಿದ್ದಾರೆ. ಆದರೆ ಪತ್ತೆ ಆಗದಿರುವುದು ಮನೆಯವರಲ್ಲಿ ಆತಂಕ ಮೂಡಿಸಿದೆ.
    ಹಳ್ಳದ ನೀರು ರಭಸವಾಗಿ ಹರಿಯುತ್ತಿವೆ. ಮಂಗಳವಾರವೂ ಸ್ವಲ್ಪ ಮಳೆಯಾಗಿದ್ದು, ಮತ್ತಷ್ಟು ಮಳೆಯಾದರೆ ಪತ್ತೆ ಕಾರ್ಯಕ್ಕೆ ಹೆಚ್ಚಿನ ಸಮಸ್ಯೆ ಎದುರಾಗಲಿದೆ. ಮುಳ್ಳಿನ ಕಂಟಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದ್ದು, ಪತ್ತೆ ಸವಾಲಾಗಿ ಪರಿಣಮಿಸಿದೆ.
    ವಿಷಯ ತಿಳಿದು ಸೋಮವಾರ ರಾತ್ರಿಯೇ ಶಾಸಕ ಡಾ.ಸಿದ್ದು ಪಾಟೀಲ್, ತಹಸೀಲ್ದಾರ್ ಶಾಂತನಗೌಡ ಭೇಟಿ ನೀಡಿ, ತಡರಾತ್ರಿವರೆಗೆ ಸ್ಥಳದಲ್ಲಿಯೇ ಇದ್ದರು.
    ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಗ್ಗೆವರೆಗೆ ಮುಡಬಿ ವಲಯದಲ್ಲಿ ೭೬ ಎಂಎಂ ಮಳೆ ಆಗಿದೆ. ಬಸವಕಲ್ಯಾಣ-೪೮ ಎಂಎಂ, ಕೋಹಿನೂರ ೩೩ ಎಂಎಂ, ರಾಜೇಶ್ವರ ೫೫ ಎಂಎಂ, ಮಂಠಾಳ-೬೨ ಎಂಎಂ, ಹುಲಸೂರ ವಲಯದಲ್ಲಿ ೪೫ ಎಂಎA ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts