More

    ಭತ್ತ, ರಾಗಿ ಬಣವೆ ಹಾಕಲು ಮಳೆ ಅಡ್ಡಿ

    ಅರಕಲಗೂಡು: ತಾಲೂಕಿನಲ್ಲಿ ಭತ್ತ ಹಾಗೂ ರಾಗಿ ಬೆಳೆ ಕಟಾವಿಗೆ ಮಳೆ ಅಡ್ಡಿಯಾಗಿದ್ದು ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.


    ಕಳೆದ ಕೆಲ ದಿನಗಳಿಂದ ಭತ್ತ ಹಾಗೂ ರಾಗಿ ಬೆಳೆ ಕಟಾವು ಕಾರ್ಯ ಕೈಗೊಂಡಿರುವ ರೈತರಿಗೆ ಮಳೆ ಶಾಪವಾಗಿ ಪರಿಣಮಿಸಿದೆ. ಕಟ್ಟೇಪುರ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿ ಸೇರಿದಂತೆ ಸಾಕಷ್ಟು ಕೆರೆ-ಕಟ್ಟೆ ಅಚ್ಚುಕಟ್ಟೆಯ ಜಮೀನಿನಲ್ಲಿ ಬೆಳೆದಿದ್ದ ಭತ್ತ ಹಾಗೂ ರಾಗಿ ಬೆಳೆ ಕಟಾವು ಕಾರ್ಯ ಮುಗಿಸಿದ್ದಾರೆ. ಕೆಲವು ಕಡೆ ಇನ್ನೂ ಕಟಾವು ಮಾಡಲು ಸಾಧ್ಯವಾಗಿಲ್ಲ. ಬರಗಾಲ ಎದುರಿಸಿ ಬೆಳೆದ ಬೆಳೆಗಳಿಗೆ ಇದೀಗ ಬೀಳುತ್ತಿರುವ ಮಳೆಗೆ ರೈತರು ದಿಕ್ಕು ತೋಚದಾಗಿ ತಲೆಮೇಲೆ ಕೈಹೊತ್ತು ಕೂರುವ ಸ್ಥಿತಿ ಬಂದೊದಗಿದೆ.


    ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆ ಶನಿವಾರ ಹಗಲು ಬಿಡುವು ನೀಡಿತ್ತು. ಇದ್ದಕ್ಕಿದ್ದಂತೆ ರಾತ್ರಿ ಜೋರಾಗಿ ಸುರಿಯಲಾರಂಭಿಸಿತು. ಮಳೆ ನೀರಿಗೆ ಗದ್ದೆಯಲ್ಲಿ ಕಟಾವು ಮಾಡಿರುವ ಭತ್ತ ಮುಗ್ಗಲು ಹತ್ತಿ ಕರಗುತ್ತಿದ್ದರೆ ಹೊಲದಲ್ಲಿ ಕಟಾವಾಗಿರುವ ರಾಗಿ ಹತ್ತಿ ಗೆದ್ದಲು ಆವರಿಸಿ ನಾಶವಾಗುತ್ತಿದೆ. ಹಾಗಾಗಿ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗದಂತಾಗಿದೆ.


    ಬಣವೆ ಹಾಕಲು ಹುಲ್ಲು ಒಣಗಿಲ್ಲ. ಕಷ್ಟಪಟ್ಟು ಬೆಳೆದ ಫಸಲು ತೆಗೆದುಕೊಳ್ಳಲು ಮಳೆ ಬಿಡುವು ನೀಡುತ್ತಿಲ್ಲ. ಬೆಳೆದ ಬೆಳೆ ಹಾನಿಗೊಳಗಾಗಿ ಸಂಕಷ್ಟಕ್ಕೀಡಾಗಿದ್ದೇವೆ ಎಂದು ಅನ್ನದಾತರು ಅಳಲು ತೋಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts