More

    ನಾಳೆಯಿಂದ ರಾಜ್ಯದ ಹಲವೆಡೆ ಮಳೆ! ಹೀಗಿದೆ ವರದಿ

    ಬೆಂಗಳೂರು: ರಾಜ್ಯದ ಹಲವೆಡೆ ಮುಂದಿನ 4 ದಿನ ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮೇ 7ರಿಂದ ಮೇ 10ರವರೆಗೆ ಜೋರಾಗಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಮೇ 7ರಿಂದ ಐದು ದಿನ, ಉತ್ತರ ಕನ್ನಡದಲ್ಲಿ ಮೇ 10ರಿಂದ ಮೂರು ದಿನ ಹಾಗೂ ಕಲಬುರಗಿ, ಕೊಪ್ಪಳ, ರಾಯಚೂರಿನಲ್ಲಿ ಮೇ 8ರಿಂದ ಮೇ 10ರವರೆಗೆ ಸಾಧಾರಣ ವರ್ಷಧಾರೆ ಯಾಗಲಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ.

    11 ಜಿಲ್ಲೆಯಲ್ಲಿ 40 ದಾಟಿದ ಉಷ್ಣಾಂಶ: ಕಲಬುರಗಿಯಲ್ಲಿ ಭಾನುವಾರ 44.7 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಯಾದಗಿರಿ 44, ಕೊಪ್ಪಳ 43.3, ಬಳ್ಳಾರಿ 43.3, ತುಮಕೂರು 43.1, ವಿಜಯಪುರ 42.5, ಬಾಗಲಕೋಟೆ 42.5, ಬೀದರ್ 42, ಧಾರವಾಡ 40 ಹಾಗೂ ಬೆಳಗಾವಿ 40 ಡಿ.ಸೆ. ಉಷ್ಣಾಂಶ ವರದಿಯಾಗಿದ್ದು, ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ 4 ದಿನ ಬಿಸಿ ಗಾಳಿ ಬೀಸಲಿದೆ. ಸತತ ನಾಲ್ಕು ದಿನದ ಬಳಿಕ ಬೆಂಗಳೂರಿನಲ್ಲಿ 37 ಡಿ.ಸೆ.ಗೆ ಇಳಿದಿದೆ. ಮೇ 1ರಿಂದ ಮೇ 4ರವರೆಗೆ ನಗರದಲ್ಲಿ ಉಷ್ಣಾಂಶ 40ರ ಗಡಿ ದಾಟಿತ್ತು. ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಬಿಸಿ ವಾತಾವರಣ ಇರಲಿದೆ.

    ರಾಯಚೂರಿನಲ್ಲಿ 44.4 ಡಿಗ್ರಿ: 

    ತಾಪಮಾನ: ರಾಯಚೂರು ಜಿಲ್ಲೆಯಲ್ಲಿ ಕಳೆದ ಇಪ್ಪತೆôದು ವರ್ಷಗಳಲ್ಲಿ ಶನಿವಾರ ಅತ್ಯಧಿಕ ತಾಪಮಾನ 44.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ 26 ವರ್ಷಗಳ ನಂತರ ಕಂಡ ಅತ್ಯಧಿಕ ತಾಪಮಾನ ಇದಾಗಿದೆ. ಜನರು ಬಿಸಿಲ ಬೇಗೆಯಿಂದ ಸಂಕಷ್ಟ ಎದುರಿಸುವಂಥ ಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ 1998ರ ಮೇನಲ್ಲಿ 44 ಡಿಗ್ರಿ ಸೆಲ್ಸಿಯಸ್ ಮತ್ತು 2019ರ ಮೇನಲ್ಲಿ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಇದುವರೆಗಿನ ಅತ್ಯಧಿಕ ತಾಪಮಾನವಾಗಿತ್ತು.

    ಪ್ರವಾಹ ಎದುರಿಸಲು ಸಜ್ಜಾಗಿ: 

    ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿರಲಿದೆ ಎಂಬ ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಹಿನ್ನೆಲೆಯಲ್ಲಿ ಸಂಭವನೀಯ ಪ್ರವಾಹ ಎದುರಿಸಲು ಸಜ್ಜಾಗುವಂತೆ ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂಗಾರು ಮಳೆ ಶೇ.104 ಇರುತ್ತದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಕಂದಾಯ ಇಲಾಖೆಯಿಂದ ಹೊರಡಿಸಿರುವ ಸುತ್ತೋಲೆಯಲ್ಲಿ ಯಾವ ಇಲಾಖೆಯಿಂದ ಏನು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ.

    ಪ್ರವಾಹದಿಂದಾಗುವ ಹಾನಿ ತಡೆಗಟ್ಟಲು ತಾಲೂಕು ಆಡಳಿತಗಳ ಜತೆ ಸಭೆ ನಡೆಸಿ ಸಜ್ಜಾಗುವಂತೆ ಸೂಚಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಮಳೆಗಾಲಕ್ಕೆ ಮುಂಚಿತವಾಗಿ ನೀರು ಸರಾಗವಾಗಿ ಹರಿಯುವಂತೆ ಕಾಲುವೆಗಳನ್ನು ಸರಿಪಡಿಸಬೇಕು. ಚರಂಡಿ, ಸೇತುವೆಗಳಲ್ಲಿ ತುಂಬಿರುವ ಹೂಳು ತೆಗೆಯಬೇಕು. ನದಿ, ನೀರಾವರಿ ಕೆರೆ ಕಾಲುವೆಗಳ ಸಮೀಪದ ನೆರೆಪೀಡಿತ ಪ್ರದೇಶವನ್ನು ಗುರುತಿಸಿ ಚರಂಡಿಗಳ ಮೇಲಿನ ಚಪ್ಪಡಿಗಳನ್ನು ಸುಸ್ಥಿತಿಯಲ್ಲಿರಿಸಲು ತಿಳಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿ ಮೊಬೈಲ್ ನಂಬರ್ ಸಂಗ್ರಹಿಸಿ ವಾಟ್ಸ್​ಆಪ್ ಗ್ರೂಪ್ ರಚಿಸಬೇಕು. ತುರ್ತು ನಿರ್ವಹಣಾ ಕೇಂದ್ರ ಸ್ಥಾಪಿಸಬೇಕು. ಭೂ ಕುಸಿತವಾಗುವ ಪ್ರದೇಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ವರುಣಾ ಮಿತ್ರದ ನೆರವು ಪಡೆಯಬೇಕು. ವಿದ್ಯುತ್, ಆರೋಗ್ಯ, ಪಶು ಸಂಗೋಪನೆ, ಕೌಶಲಾಭಿವೃದ್ಧಿ, ಅಗ್ನಿಶಾಮಕ ಸೇರಿ ಅಗತ್ಯ ಇಲಾಖೆಗಳನ್ನು ಸಜ್ಜುಗೊಳಿಸಬೇಕೆಂದು ಡಿಸಿಗಳಿಗೆ ನಿರ್ದೇಶನ ನೀಡಲಾಗಿದೆ.

    5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

    ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts