More

    ಕರೊನಾ ಚಿಕಿತ್ಸೆಗೆ ಬೆಂಬಲವಾಗಿ ನಿಂತ ಭಾರತೀಯ ರೈಲ್ವೆ… ಹೊರಡಲಿದೆ ‘ಆಕ್ಸಿಜನ್ ಎಕ್ಸ್​ಪ್ರೆಸ್​’!

    ನವದೆಹಲಿ : ಕರೊನಾ ಚಿಕಿತ್ಸೆಯಲ್ಲಿ ಹೆಚ್ಚಾಗಿ ಅಗತ್ಯ ಬೀಳುವ ಮೆಡಿಕಲ್ ಆಕ್ಸಿಜನ್ (ಆಮ್ಲಜನಕ)ಅನ್ನು ಮತ್ತು ಆಕ್ಸಿಜನ್ ಸಿಲಿಂಡರ್​ಗಳನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸಲು, ಭಾರತೀಯ ರೈಲ್ವೆಯು “ಆಕ್ಸಿಜನ್ ಎಕ್ಸ್​ಪ್ರೆಸ್​” ವಿಶೇಷ ರೈಲು ಸೇವೆಯನ್ನು ಆರಂಭಿಸಲಿದೆ. ಈ ಬಗ್ಗೆ ಇಂದು ರೈಲ್ವೆ ಇಲಾಖೆಯು ಸುದ್ದಿಗಾರರಿಗೆ ಮಾಹಿತಿ ನೀಡಿದೆ.

    ಮುಂಬೈನ ಕಲಂಬೋಳಿ ರೈಲು ನಿಲ್ದಾಣ ಮತ್ತು ಬೋಯಿಸಾರ್​ ರೈಲು ನಿಲ್ದಾಣಗಳಿಂದ ಸೋಮವಾರ ಖಾಲಿ ಟ್ಯಾಂಕರ್​ಗಳು ಪ್ರಯಾಣ ಆರಂಭಿಸಲಿವೆ. ಇವು ವಿಜಾಗ್​, ಜಮ್​ಶೇಡ್​ಪುರ, ರೂರ್ಕೆಲಾ ಮತ್ತು ಬೊಕಾರೋಗಳಿಗೆ ಹೋಗಿ ದ್ರವರೂಪದ ಮೆಡಿಕಲ್ ಆಕ್ಸಿಜನ್​ಅನ್ನು ಲೋಡ್​ ಮಾಡಿಸಿಕೊಳ್ಳಲಿವೆ. ಅಲ್ಲಿಂದ ದೇಶದ ವಿವಿಧ ಭಾಗಗಳಿಗೆ ಸರಬರಾಜು ಮಾಡಲು ತೆರಳಲಿವೆ ಎನ್ನಲಾಗಿದೆ. (ಏಜೆನ್ಸೀಸ್)

    ‘ಎಷ್ಟು ಲಸಿಕೆ ಆರ್ಡರ್ ಮಾಡಿದ್ದೀರಿ ?’ – ಮೋದಿಗೆ ಮನಮೋಹನ್​ ಸಿಂಗ್ ಪ್ರಶ್ನೆ

    ಓಡಿಹೋಗಿದ್ದ ಪ್ರೇಮಿಗಳನ್ನು ಹಿಡಿದುತಂದ ಪೊಲೀಸ್​; ಯುವತಿ ಮನೆಗೆ, ಯುವಕ ಮಸಣಕ್ಕೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts