More

    ಲಾಕ್​ಡೌನ್ ಅವಧಿಯಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ 1,885 ಕೋಟಿ ರೂ.ಮರುಪಾವತಿಸಿದ ಭಾರತೀಯ ರೈಲ್ವೆ

    ನವದೆಹಲಿ:ಲಾಕ್ ಡೌನ್ ಅವಧಿಯಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸಿದ ಮತ್ತು ಟಿಕೆಟ್ ರದ್ದುಗೊಂಡ ಪ್ರಯಾಣಿಕರಿಗೆ ಒಟ್ಟು 1,885 ಕೋಟಿ ರೂ.ಗಳನ್ನು ಮರುಪಾವತಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
    ಕರೊನಾವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಯಾದಾಗ ಭಾರತೀಯ ರೈಲ್ವೆ ಸಾಮಾನ್ಯ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಿತ್ತು. ರೈಲು ಸೇವೆಯನ್ನು ಒಟ್ಟಿಗೆ ರದ್ದುಗೊಳಿಸಿದ್ದರಿಂದ, ರೈಲ್ವೆ ಪ್ರಯಾಣಿಕರಿಗೆ ದೊಡ್ಡ ಮೊತ್ತ ಮರುಪಾವತಿ ಮಾಡುವ ಸವಾಲನ್ನು ರೈಲ್ವೆ ಇಲಾಖೆ ಎದುರಿಸಬೇಕಾಗಿತ್ತು.”ಟಿಕೆಟ್ ರದ್ದುಗೊಂಡ ಪ್ರಯಾಣಿಕರಿಗೆ ಮಾರ್ಚ್ 21 ರಿಂದ ಮೇ 31 ರ ಅವಧಿಯಲ್ಲಿ ಒಟ್ಟು 1885 ಕೋಟಿ ರೂ. ಗಳನ್ನು ಆಯಾ ಪ್ರಯಾಣಿಕರ ಖಾತೆಗೆ ಮರುಪಾವತಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

    ಛತ್ತೀಸಗಢ ವಲಸಿಗರಿಗೆ ವಿಮಾನಯಾನಕ್ಕೆ ಸಹಾಯ ಮಾಡಿದ ವಕೀಲರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts