More

    ನೈಋತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಒಪ್ಪಂದದ ಆಧಾರದ ವೈದ್ಯ ಹುದ್ದೆಗೆ ನೇರ ಸಂದರ್ಶನ ಇಂದಿನಿಂದ

    ಬೆಂಗಳೂರು: ಕೋವಿಡ್​ 19 ಎದುರಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಒಪ್ಪಂದದ ಆಧಾರದ ಮೇಲೆ ವೈದ್ಯರನ್ನು ನಿವೃತ್ತ ರೈಲ್ವೆ ವೈದ್ಯ/ ಕೇಂದ್ರ / ರಾಜ್ಯ ಸರ್ಕಾರದ ನಿವೃತ್ತ ವೈದ್ಯಕಿಯ ಅಧಿಕಾರಿಗಳನ್ನು ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ.

    ಒಟ್ಟು 8 ಹುದ್ದೆಗಳಿವೆ ಎಂಬಿಬಿಎಸ್​ ಪದವಿ ಪಾಸಾಗಿರಬೇಕು. ಅರಿವಳಿಕೆ ತಜ್ಞರು, ವೈದ್ಯರು, ಎದೆ ವೈದ್ಯರು ಮತ್ತು ಇಂಟೆನ್ಸಿವಿಸ್ಟ್​ಗಳಿಗೆ ಆದ್ಯತೆ ನೀಡಲಾಗುತ್ತದೆ. 2020ರ ಏಪ್ರಿಲ್​ 2 ಕ್ಕೆ ಅನ್ವಯಿಸುವಂತೆ ಇತರ ಅಭ್ಯಥಿರ್ಗಳಿಗೆ ಗರಿಷ್ಠ 50 ವರ್ಷ, ನಿವೃತ್ತ ರೈಲ್ವೆ ವೈದ್ಯರು/ ಇತರ ಕೇಂದ್ರ ಮತ್ತು ರಾಜ್ಯ ಸರ್ಕಾರಿ ವೈದ್ಯಕಿಯ ಅಧಿಕಾರಿಗೆ ಗರಿಷ್ಠ 65 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ಒಪ್ಪಂದದ ಅವಧಿ ಮೂರು ತಿಂಗಳು. ಗೌರವ ಧನ & ಇತರ ಅಭ್ಯರ್ಥಿಗಳಿಗೆ 75 ಸಾವಿರ ರೂ., ನಿವೃತ್ತ ರೈಲ್ವೆ ವೈದ್ಯರು/ ಇತರ ಕೇಂದ್ರ ಮತ್ತು ರಾಜ್ಯ ಸರ್ಕಾರಿ ವೈದ್ಯಕಿಯ ಅಧಿಕಾರಿಗಳಿಗೆ ಮಾಸಿಕ 46 ಸಾವಿರ ರೂ. ಇರುತ್ತದೆ.

    “ಮುಖ್ಯ ವೈದ್ಯಕಿಯ ಅಧೀಕ್ಷಕರ ಕಚೇರಿ ( ಸಿಎಂಎಸ್​) ರೈಲ್ವೆ ಆಸ್ಪತ್ರೆ, ಒಂಟಿಕೊಪ್ಪಳ, ಯಾದವಗಿರಿ, ಮೈಸೂರಿನಲ್ಲಿ ಏಪ್ರಿಲ್​ 3 ರಿಂದ ಏಪ್ರಿಲ್​ 10 ರವರೆಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ರ ವರೆಗೆ ನೇರ ಸಂದರ್ಶನ ನಡೆಯಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

    ಆರ್‌ಬಿಐನಲ್ಲಿ ಕನ್ಸಲ್ಟೆಂಟ್ಸ್, ಸ್ಪೆಷಲಿಸ್ಟ್ಸ್, ಅನಲಿಸ್ಟ್ ಹುದ್ದೆಗಳು, ಅರ್ಜಿ ಸಲ್ಲಿಸಲು ಏಪ್ರಿಲ್ 29 ಕೊನೇ ದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts