More

    ಗ್ರಾಮಸ್ಥರ ಅನುಕೂಲಕ್ಕೆ ಸರ್ವೀಸ್ ರಸ್ತೆ, ಶೆಡ್

    ಚಿಕ್ಕಮಗಳೂರು: ಪ್ರಯಾಣಿಕರು ಹಾಗೂ ಗ್ರಾಮಸ್ಥರ ಅನುಕೂಲಕ್ಕೆ ನಗರದ ರೈಲ್ವೆ ನಿಲ್ದಾಣದಲ್ಲಿ ಶೆಡ್ ನಿರ್ವಣ, ಬೇಲೇನಹಳ್ಳಿ ಬಳಿ ಸರ್ವೀಸ್ ರಸ್ತೆ ನಿರ್ವಣಕ್ಕೆ ಕ್ರಮ ಕೈಗೊಳ್ಳಲು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

    ಸಂಸದರ ಕಚೇರಿಯಲ್ಲಿ ಬುಧವಾರ ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಅವರು, ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

    ತರೀಕೆರೆ ತಾಲೂಕು ಬೇಲೇನಹಳ್ಳಿ ಎಚ್.ತಿಮ್ಮಾಪುರ ಗೇಟ್ ಬಳಿ 800 ಮೀಟರ್ ಅಂತರದಲ್ಲಿ ಎರಡು ರೈಲ್ವೆ ಅಂಡರ್​ಪಾಸ್​ಗಳಿದ್ದು ವಾಹನ ಸವಾರರು, ಗ್ರಾಮೀಣ ಜನ ಅಪಾಯದ ಸ್ಥಿತಿಯಲ್ಲಿ ಓಡಾಡುತ್ತಿದ್ದಾರೆ. ಹಾಗಾಗಿ ಸರ್ವೀಸ್ ರಸ್ತೆ ನಿರ್ವಿುಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು.

    ನಗರ ಹೊರವಲಯದ ಹಿರೇಮಗಳೂರು ರೈಲ್ವೆ ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿ ಇಲ್ಲದಿರುವುದರಿಂದ ಬೇಸಿಗೆ ಹಾಗೂ ಮಳೆಗಾಲದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು ಜನರ ಅನುಕೂಲಕ್ಕಾಗಿ ಶೆಡ್ ನಿರ್ವಿುಸಬೇಕು ಎಂದು ಜನರು ಮನವಿ ಮಾಡಿದರು. ಈ ಎರಡೂ ಮನವಿ ಪರಿಶೀಲಿಸಿ ಅನುಕೂಲ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ರಾಮೇಶ್ವರ ನಗರದ ಹಳ್ಳದ ರಾಮೇಶ್ವರ ದೇವಸ್ಥಾನದ ಬಳಿ ಯಗಚಿಹಳ್ಳ ಹರಿಯುತ್ತಿದೆ. ಮಳೆಗಾಲ ಹೊರತು ಪಡಿಸಿ ಉಳಿದಂತೆ ಹಳ್ಳದಲ್ಲಿ ನೀರು ಕಡಿಮೆಯಾದಾಗ ತ್ಯಾಜ್ಯಗಳಿಂದ ದುರ್ವಾಸನೆ ಬೀರುತ್ತದೆ. ಇದರಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತಿದೆ ಎಂಬ ದೂರಿದೆ. ದೇವಾಲಯದ ಮುಂಭಾಗ ಹಳ್ಳಕ್ಕೆ ತಡೆಗೋಡೆ ನಿರ್ವಿುಸಿ ಮೇಲುಹಾಸು ಹಾಕಲು 10 ಲಕ್ಷ ರೂ. ವೆಚ್ಚದ ಅಂದಾಜು ಪಟ್ಟಿ ಸಲ್ಲಿಸಿದ್ದು, ಕಾಲುವೆ ನಿರ್ವಣಕ್ಕೆ ಅನುದಾನ ಬಿಡುಗಡೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ.

    ಚಿಕ್ಕಮಗಳೂರು ತಾಲೂಕು ಹೊಸಕೋಟೆಯಲ್ಲಿ ಸ್ಪೈಸ್ ಪಾರ್ಕ್ ನಿರ್ವಣಕ್ಕೆ ಜಿಲ್ಲಾಧಿಕಾರಿ 10 ಎಕರೆ ಜಾಗ ಮಂಜೂರು ಮಾಡಿದ್ದು ಸರ್ಕಾರಕ್ಕೆ ನಿಗದಿತ ಸಂದಾಯ ಮಾಡಿ ಮಂಜೂರು ಮಾಡಿಸಿಕೊಳ್ಳಬೇಕು. ಸ್ಪೈಸ್ ಪಾರ್ಕ್ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ವಿುಸುತ್ತಿರುವುದರಿಂದ ಜಾಗವನ್ನು ಉಚಿತವಾಗಿ ನೀಡುವಂತೆ ಸಂಬಂಧ ಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ರ್ಚಚಿಸಬೇಕು ಎಂದು ಅವರು ತಿಳಿಸಿದ್ದಾರೆ.

    ತ್ರಿಚಕ್ರ ವಾಹನ ನೀಡಲು ಸೂಚನೆ: ಶೃಂಗೇರಿ ತಾಲೂಕಿನ ಹಾರೂರು ಗ್ರಾಮದ ಅಂಗವಿಕಲ ಆದರ್ಶ ಎಂಬುವರು ಯಂತ್ರಚಾಲಿತ ತ್ರಿಚಕ್ರವಾಹನ ನೀಡುವಂತೆ ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಪರಿಗಣಿಸಿ ಅವರಿಗೆ ತ್ರಿಚಕ್ರವಾಹನ ನೀಡಿ ಎಂದು ಶೋಭಾ ಕರಂದ್ಲಾಜೆ ಸೂಚನೆ ನೀಡಿದರು.

    964 ಸಣ್ಣ ದೂರದರ್ಶನ ಕೇಂದ್ರ ಮೇಲ್ದರ್ಜೆಗೆ?: ದೇಶದಲ್ಲಿ 964 ಸಣ್ಣ ದೂರದರ್ಶನ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ತೀರ್ವನಿಸಿದೆ. ಇದರಿಂದ ಚಿಕ್ಕ ಕೇಂದ್ರಗಳ ಬದಲಾವಣೆ ಮೂಲಕ ಪರಿವರ್ತನೆಗೆ ಸಹಕಾರಿಯಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

    ಚಿಕ್ಕಮಗಳೂರಿನ ದೂರದರ್ಶನ ಮರುಪ್ರಸಾರ ಕೇಂದ್ರ ಅತ್ಯಂತ ಚಿಕ್ಕದಾಗಿದ್ದು, ಹಳೆಯ ತಂತ್ರಜ್ಞಾನವಿದೆ. ಅದನ್ನು ಸ್ಥಳಾಂತರಿಸದೆ ನವೀಕರಣ ಮಾಡಲು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹಾಗೂ ದೂರದರ್ಶನದ ಮುಖ್ಯಾಧಿಕಾರಿ ಜತೆ ರ್ಚಚಿಸಿದ್ದು, ಪರಿಶೀಲನೆ ಭರವಸೆ ನೀಡಿದ್ದಾರೆ ಎಂದರು.

    ಜಿಪಂ ಸದಸ್ಯೆ ಜಸಂತಾ ಅನಿಲ್​ಕುಮಾರ್, ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ ರತ್ನಾಕರ್ ಶೆಟ್ಟಿ, ಶಸಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts