More

    VIDEO| ವಿದ್ಯಾರ್ಥಿಗಳನ್ನು ಗುಂಪುಗೂಡಿಸಿ ಕೊಠಡಿಯಲ್ಲಿ ನೃತ್ಯ: ಖಾಸಗಿ ಕಾಲೇಜ್​ಗೆ ನೋಟಿಸ್​ ಜಾರಿ!

    ರಾಯಚೂರು: ಜಿಲ್ಲೆಯಾದ್ಯಂತ ಕರೊನಾ ಅಟ್ಟಹಾಸ ಮುಂದುವರೆದಿದ್ದರೂ ಲಾಕ್​ಡೌನ್​ ನಿಯಮಕ್ಕೆ ಕ್ಯಾರೆ ಎನ್ನದೇ ಒರಿಯಂಟೇಷನ್ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳು ಒಟ್ಟಿಗೆ ಹೆಜ್ಜೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದ್ದು, ಕಾರ್ಯಕ್ರಮ ಆಯೋಜಿಸಿದ ಖಾಸಗಿ ಕಾಲೇಜಿನ ವಿರುದ್ಧ ನೋಟಿಸ್​ ಜಾರಿಯಾಗಿದೆ.

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಶಾಲಾ‌ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ, ಇದಕ್ಕೆ ಸೊಪ್ಪು ಹಾಕದೇ ಮಾನ್ವಿಯ ಲೊಯೋಲಾ ಕಾಲೇಜಿನಲ್ಲಿ ಒರಿಯಂಟೇಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ವೇಳೆ ಸಾಮಾಜಿಕ ಅಂತರವನ್ನು ಕಾಪಾಡದೇ ಕುಣಿದು ಕುಪ್ಪಳಿಸಿದ್ದಾರೆ. ಯಾರೊಬ್ಬರೂ ಸಹ ಮಾಸ್ಕ್ ಧರಿಸಿರಲಿಲ್ಲ. ಇದೀಗ ಕಾಲೇಜು ಆಡಳಿತ ಮಂಡಳಿಯ ಕಾರ್ಯ ವೈಖರಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚಿರುಗೆ ಮೊದಲೇ ಸಾವಿನ ಸುಳಿವಿತ್ತಾ?: ಲಾಕ್​ಡೌನ್​ ನಡುವೆಯೇ ಹೀಗ್ಯಾಕಂದಿದ್ರು…

    ನೋಟಿಸ್​ ಜಾರಿ
    ಕೋವಿಡ್ ನಿಯಮ ಉಲ್ಲಂಘಿಸಿ ಸಾಮೂಹಿಕ ನೃತ್ಯ ಆಯೋಜಿಸಿದ್ದ ಕಾಲೇಜು ಕುರಿತು ದಿಗ್ವಿಜಯ 24X7 ನ್ಯೂಸ್​ ವಿಸ್ತೃತ ವರದಿ ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಕಾಲೇಜಿಗೆ ನೋಟಿಸ್ ನೀಡಿದೆ. 24 ಗಂಟೆಯೊಳಗೆ ಉತ್ತರಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ವಿದ್ಯಾರ್ಥಿಗಳನ್ನು ಗುಂಪುಗೂಡಿಸಿ ಕೊಠಡಿಯಲ್ಲಿ ನೃತ್ಯ: ಖಾಸಗಿ ಕಾಲೇಜ್​ಗೆ ನೋಟಿಸ್​ ಜಾರಿ!

    ರಾಯಚೂರು: ಜಿಲ್ಲೆಯಾದ್ಯಂತ ಕರೊನಾ ಅಟ್ಟಹಾಸ ಮುಂದುವರೆದಿದ್ದರೂ ಲಾಕ್​ಡೌನ್​ ನಿಯಮಕ್ಕೆ ಕ್ಯಾರೆ ಎನ್ನದೇ ಒರಿಯಂಟೇಷನ್ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳು ಒಟ್ಟಿಗೆ ಹೆಜ್ಜೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದ್ದು, ಕಾರ್ಯಕ್ರಮ ಆಯೋಜಿಸಿದ ಖಾಸಗಿ ಕಾಲೇಜಿನ ವಿರುದ್ಧ ನೋಟಿಸ್​ ಜಾರಿಯಾಗಿದೆ.#Raichuru #College #LockdownBreach #Coronavirus #Students

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಜೂನ್ 13, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts