ಚಿರುಗೆ ಮೊದಲೇ ಸಾವಿನ ಸುಳಿವಿತ್ತಾ?: ಲಾಕ್​ಡೌನ್​ ನಡುವೆಯೇ ಹೀಗ್ಯಾಕಂದಿದ್ರು...

Chiru Sarja 7 June 20
Published on

ಬೆಂಗಳೂರು: ನಟ ಚಿರಂಜೀವಿ ಸರ್ಜಾರಿಗೆ ಮೊದಲೇ ಸಾವಿನ ಸುಳಿವಿತ್ತಾ? ಹೀಗೊಂದು ಪ್ರಶ್ನೆಗೆ ಕಾರಣವಾಗಿದ್ದು, ಚಿರು ತಮ್ಮ ಆಪ್ತ ವಯಲದಲ್ಲಿ ನಡೆಸಿದ ವಾಟ್ಸ್​ಆ್ಯಪ್ ಸಂಭಾಷಣೆಯೊಂದರ ಸ್ಕ್ರೀನ್​ ಶಾಟ್.

ಹಾಯ್​ ಫ್ರೆಂಡ್ಸ್​ ನಿಮಗೊಂದು ಗೊತ್ತಾ... ನಾನು ನಿಮ್ಮನ್ನು ಪ್ರೀತಿಸುತ್ತೇನೆ ಫ್ರೆಂಡ್ಸ್​.... ನಾವು ಒಂದು ವಾರ ಎಲ್ಲಾದರೂ ಪ್ರವಾಸ ಹೋಗೋಣ..ನಾವು ಕಳೆದುಕೊಂಡಿದ್ದನ್ನು ಮತ್ತೆ ಪಡೆಯೋಣ... ನನ್ನನ್ನು ನಂಬಿ ನಿಮ್ಮಗಳ ಜತೆಯಲ್ಲಿರುವುದಕ್ಕಿಂತ ಅತ್ಯಮೂಲ್ಯವಾದದ್ದು ಬೇರೇನಿಲ್ಲ ಎಂದಿದ್ದಾರೆ. ಕೊನೆಯದಾಗಿ "ನಮ್ಮಲ್ಲಿ ಏನಿದೆ ಎಂಬುದು ನಮಗೇ ತಿಳಿದಿಲ್ಲ" ಎನ್ನುವ ಚಿರು ಮಾತು ಎಂತವರನ್ನೂ ಭಾವುಕರನ್ನಾಗಿಸದೇ ಇರದು. ಇದನ್ನೂ ಓದಿ: ಚಿರು ಸರ್ಜಾ ಆ್ಯಂಡ್​ ಗ್ಯಾಂಗ್​; ಇವು ಬಾಲ್ಯದ ಹಸಿ ಹಸಿ ನೆನಪುಗಳು..

ಲಾಕ್​ಡೌನ್ ನಡುವೆ ನಡೆದಿರುವ ಸಂಭಾಷಣೆ ಇದಾಗಿದ್ದು, ಲಾಕ್​ಡೌನ್​ಮುಗಿಯುತ್ತಿದ್ದಂತೆಯೇ ಸ್ನೇಹಿತರೊಟ್ಟಿಗೆ ಪ್ರವಾಸ ಮಾಡಬೇಕೆಂಬುದು ಚಿರು ಬಯಕೆಯಾಗಿತ್ತು. ಆದರೆ, ಅವರ ಬಯಕೆ ಕೊನೆಗೂ ಈಡೇರಲೇ ಇಲ್ಲ. ಅಷ್ಟರಲ್ಲಾಗಲೇ ಚಿರು ಬದುಕಿನಲ್ಲಿ ಕ್ರೂರ ವಿಧಿ ತನ್ನ ಅಟ್ಟಹಾಸವನ್ನು ಮೆರೆದೇ ಬಿಟ್ಟಿತು. ವಾಟ್ಸ್​ ಆ್ಯಪ್​ ಸಂಭಾಷಣೆಯನ್ನು ಚಿರು ಗೆಳೆಯ ಹಾಗೂ ನಟ ಪ್ರಜ್ವಲ್​ ದೇವರಾಜ್​ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net