More

    ಉಪಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ಗೆ ಬಿಗ್ ಶಾಕ್ ನೀಡಿದ ವಿಜಯೇಂದ್ರ..!

    ರಾಯಚೂರು: ಉಪಚುನಾವಣೆಯ ಹೊಸ್ತಿಲಲ್ಲೇ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರರವರು ಕಾಂಗ್ರೆಸ್​ಗೆ ಬಿಗ್​ಶಾಕ್​ ನೀಡಿದ್ದಾರೆ. ಕಾಂಗ್ರೆಸ್​ ಪಕ್ಷದ ಮಾಜಿ ಸಂಸದರೊಬ್ಬರು ಬಿಜೆಪಿ ಸೇರಲು ವೇದಿಕೆ ಸಿದ್ಧವಾಗಿದ್ದು, ಇದೇ 9ನೇ ತಾರೀಖು ಬೆಂಗಳೂರಿನಲ್ಲಿ ಬಿಜೆಪಿ ಸೇರುವುದು ಪಕ್ಕಾ ಆಗಿದೆ.

    ಉಪಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ಗೆ ಬಿಗ್ ಶಾಕ್ ನೀಡಿದ ವಿಜಯೇಂದ್ರ..!ಮಸ್ಕಿ ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ಸಂಸದರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಉತ್ತರ ಕರ್ನಾಟಕ ಭಾಗದ ಪ್ರಮುಖ ಕುರುಬ ಸಮುದಾಯದ ನಾಯಕ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ.

    ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಯಾದಗಿರಿ ಜಿಲ್ಲೆಗಳ ಶಾಸಕರು ಹಾಗೂ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿರುವ ವಿರೂಪಾಕ್ಷಪ್ಪ, ಕೊಪ್ಪಳ ಮಾಜಿ ಸಂಸದ ಹಾಗೂ ಕುರುಬ ಸಮುದಾಯ ಎಸ್ಟಿ ಹೋರಾಟ ಸಮಿತಿಯ ರಾಜ್ಯಾದ್ಯಕ್ಷ್ಯರು. ಮಸ್ಕಿ ಬೈ ಎಲೆಕ್ಷನ್ ಗಮನದಲ್ಲಿಟ್ಟುಕೊಂಡು ಬಿಜೆಪಿ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದೆ.

    ಮಸ್ಕಿ ಬೈ ಎಲೆಕ್ಷನ್​ನಲ್ಲಿ ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆ. ವಿರೂಪಾಕ್ಷಪ್ಪ ಅವರನ್ನು ಸೆಳೆಯುವಲ್ಲಿ ಕಸರತ್ತು ನಡೆದಿತ್ತು. ಈಗಾಗಲೇ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಭೇಟಿಯಾಗಿ ಎರಡು ಸುತ್ತಿನ ಮಾತುಕತೆ ನಡೆಸಿದ್ದರು.

    ಇದನ್ನೂ ಓದಿರಿ: ಸಂಕಷ್ಟದಲ್ಲೂ ಮಿಡಿದ ಸರ್ಕಾರ: ಕೋವಿಡ್ ಸಂದರ್ಭ ನೊಂದವರಿಗೆ 2,272 ಕೋಟಿ ರೂ. ಪ್ಯಾಕೇಜ್

    2020ರ ನವೆಂಬರ್ 20ರಂದು ಸಿಂಧನೂರಿನಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯ ದಿನವೇ ಮೊದಲ ಮುನ್ಸೂಚನೆ ಸಿಕ್ಕಿತ್ತು. ಬಿ.ವೈ.ವಿಜಯೇಂದ್ರ ಅವರು ಅದೇ ದಿನ ವಿರೂಪಾಕ್ಷಪ್ಪರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮತ್ತೊಂದೆಡೆ ಕುರುಬರ ಎಸ್ಟಿ ಹೋರಾಟದಲ್ಲಿ ಪ್ರತೀ ಬಾರಿಯೂ ಸಿದ್ದರಾಮಯ್ಯ ವಿರುದ್ಧ ವಿರೂಪಾಕ್ಷಪ್ಪ ಕಿಡಿಕಾರುತ್ತಲೇ ಬಂದಿದ್ದರು.

    ಸಿದ್ದರಾಮಯ್ಯ ಕಾಂಗ್ರೆಸ್​ನಲ್ಲಿ ಇರುವತನಕ ನಮಗೆ ಭವಿಷ್ಯ ಇಲ್ಲ ಎಂದು ಹೇಳಿಕೊಂಡಿರುವ ವಿರೂಪಾಕ್ಷಪ್ಪ, ಈಶ್ವರಪ್ಪ ಜತೆಗೆ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜ್ಯಾದ್ಯಕ್ಷರೂ ಆಗಿದ್ರು. ಕೆ.ವಿರೂಪಾಕ್ಷಪ್ಪ ಅವರು ಬಿಜೆಪಿ ಸೇರ್ಪಡೆ ಆಗುವುದರಿಂದ ಕಾಂಗ್ರಸ್​ನಲ್ಲಿ ಲಾಭ, ನಷ್ಟದ ಲೆಕ್ಕಾಚಾರ ಶುರುವಾಗಿದೆ.

    ಈಗಾಗಲೇ ಮಸ್ಕಿಯಲ್ಲಿ ಕಾಂಗ್ರೆಸ್​ನಿಂದ ಬಸನಗೌಡ ತುರ್ವಿಹಾಳ ಹಾಗೂ ಬಿಜೆಪಿಯಿಂದ ಪ್ರತಾಪ್ ಗೌಡ ಸ್ಪರ್ಧಿಸೋದು ಬಹುತೇಕ ಫಿಕ್ಸ್ ಆಗಿದೆ. (ದಿಗ್ವಿಜಯ ನ್ಯೂಸ್​)

    14ರ ಬಾಲಕನನ್ನು ರೇಪ್​ ಮಾಡಿ ಸಿಕ್ಕಿಬಿದ್ದಿದ್ದ ಮಹಿಳೆ ಈಗ ಗರ್ಭಿಣಿ: ವೈದ್ಯರ ವರದಿಯಲ್ಲಿ ಸತ್ಯಾಂಶ ಬಯಲು!

    ಸಂಪಾದನೆ ಜತೆಗೆ ವ್ಯಕ್ತಿತ್ವ ವಿಕಸನವೂ ಬಹಳ ಮುಖ್ಯ; ಸ್ಫೂರ್ತಿಯಿಂದ ರಮೇಶ್….

    ಉಳುವವನೇ ಒಡೆಯ: ರೈತರಿಗೆ ಕುಮ್ಕಿ, ಬಾಣೆ, ಬೆಟ್ಟ, ಸೊಪ್ಪಿನ ಬೆಟ್ಟ ಭೂಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts