More

    ರಾಜಕೀಯ ಕಾರಣಗಳಿಂದ ಪ್ರಧಾನಿಯಾದ ನೆಹರು; ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿಕೆ

    ಉಘೇ ಕಲ್ಯಾಣ ಕರ್ನಾಟಕ ವಿಶೇಷ ಉಪನ್ಯಾಸ

    ರಾಯಚೂರು: ದೇಶದಲ್ಲಿ ಪ್ರಧಾನಮಂತ್ರಿ ಸ್ಥಾನಕ್ಕಾಗಿ ಸರ್ದಾರ ವಲ್ಲಭಬಾಯಿ ಪಟೇಲರ ಹೆಸರು ಪ್ರಬಲವಾಗಿ ಕೇಳಿಬರುತ್ತಿತ್ತು. ಆದರೆ ಕೆಲ ರಾಜಕೀಯ ಕಾರಣಗಳಿಂದ ಜವಾಹರಲಾಲ್ ನೆಹರೂ ಅವರನ್ನು ಪ್ರಧಾನಿ ಮಾಡಲಾಯಿತು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

    ನಗರದ ಯಾದವ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉೇ ಕಲ್ಯಾಣ ಕರ್ನಾಟಕ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷವು ರಾಷ್ಟ್ರಕ್ಕಾಗಿ ಹೋರಾಡಿದ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದು, ಸ್ವಾತಂತ್ರೃದ ಸಂದರ್ಭದಲ್ಲಿ ಕಾಂಗ್ರೆಸ್ ಇಂದಿರಾ ಎಂಬ ಪ್ರತ್ಯೇಕ ಪಕ್ಷವಿತ್ತು. ಸ್ವಾತಂತ್ರೃ ಸಂಗ್ರಾಮದ ಇತಿಹಾಸದಲ್ಲಿ ಹೆಸರು ಅಳಿಸಿಹೋಗುತ್ತದೆ ಎಂಬ ಭಯದಿಂದ ಕಾಂಗ್ರೆಸ್ ಇಂದಿರಾ ಎಂಬ ಪಕ್ಷವನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವನ್ನಾಗಿ ಬದಲಾಯಿಸಲಾಯಿತು ಎಂದರು.

    ಸ್ವಾತಂತ್ರೃದ ಕಾಲ ಘಟ್ಟದಲ್ಲಿ ಗುಜರಾತಿನ ಜುನಾಘಡ್‌ನಲ್ಲಿ ಹಿಂದುಗಳು ಬಹುಸಂಖ್ಯಾತರಿದ್ದರು. ಅಲ್ಲಿನ ನವಾಬಾ ಜುನಘಡ್‌ನ್ನು ಪಾಕಿಸ್ಥಾನಕ್ಕೆ ಸೇರಿಸಲು ಒಪ್ಪಿಕೊಂಡಿದ್ದ. ಆದರೆ ಜುನಾಘಡ್‌ನ ಒಂದಿಂಚು ಜಾಗವನ್ನೂ ಪಾಕಿಸ್ತಾನಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಪಟೇಲರು ಪಟ್ಟುಹಿಡಿದರೆಂದು.

    ದೇಶ ವಿರೋಧಿ ಸಂಚು ರೂಪಿಸುವವರ ವಿರುದ್ಧ ಎನ್‌ಐಎ ಹಾಗೂ ಇತರ ಸಂಸ್ಥೆಗಳು ದಾಳಿ ನಡೆಸಿದ್ದು, ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೇ ದೇಶ ವಿರೋಧಿ ಕೃತ್ಯ ಎಸಗುತ್ತಿರುವ ಸಂಘಟನೆಗಳ ಎಡೆಮುರಿ ಕಟ್ಟುವ ಕೆಲಸ ಎನ್‌ಐಎ ಮಾಡುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

    ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಯುವ ಬ್ರಿಗೇಡ್ ಉತ್ತರ ರಾಜ್ಯ ಸಂಚಾಲಕ ವರ್ಧಮಾನ ತ್ಯಾಗಿ, ದಕ್ಷಿಣ ರಾಜ್ಯ ಸಂಚಾಲಕ ಧರ್ಮ ಹೊನ್ನಾರಿ, ಶ್ರೀನಿವಾಸ ಕಲಬುರಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts