More

    ಫಲಾನುಭವಿಗಳ ಮಾಹಿತಿ ಸಿದ್ಧವಾಗಿಟ್ಟುಕೊಳ್ಳಿ

    ರಾಯಚೂರು: ಅ.15ರಂದು ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲ ಇಲಾಖೆಯ ಅಧಿಕಾರಿಗಳು ಆಯಾ ಇಲಾಖೆಯ ಯೋಜನೆಗಳ ಫಲಾನುಭವಿಗಳು ಹಾಗೂ ಅವರಿಗೆ ನೀಡಲಾಗುವ ಸಹಾಯಧನದ ಮಾಹಿತಿಯನ್ನು ಪರಿಪೂರ್ಣವಾಗಿ ಸಿದ್ದವಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅಧಿಕಾರಿಗಳಿಗೆ ಸೂಚಿಸಿದರು.

    ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅ.15ರಂದು ನಡೆಯಲಿರುವ ಕಂದಾಯ ಸಚಿವರ ಗ್ರಾಮ ವಾಸ್ತವ್ಯದ ಕುರಿತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಂದಾಯ ಸಚಿವ ಆರ್.ಅಶೋಕ ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮಕ್ಕೆ ಅ.15ಕ್ಕೆ ಭೇಟಿ ನೀಡಲಿದ್ದು, ಅಂದು ನಡೆಯುವ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕು ಎಂದರು.

    ವಿವಿಧ ಇಲಾಖೆಗಳಿಂದ ಮಳಿಗೆಗಳನ್ನು ಸಿದ್ದಪಡಿಸಿಕೊಂಡು ಆ ಮಳಿಗೆಗಳಲ್ಲಿ ಆಯಾ ಇಲಾಖೆಯ ಯೋಜನೆಗಳು ಬಗ್ಗೆ ಮಾಹಿತಿ ನೀಡಬೇಕು ಜತೆಗೆ ಯೋಜನೆಯ ಫಲಾನುಭವಿಗಳಿಗೆ ಅಂದಿನ ದಿನವೇ ವಿವಿಧ ಇಲಾಖೆಗಳಿಂದ ಯೋಜನೆಗಳ ಸಹಾಯಧನ ನೀಡಬೇಕು. ಫಲಾನುಭವಿಗಳ ಅಥವಾ ಶಿಷ್ಯವೇತನಕ್ಕೆ ಅರ್ಹರಾದ ಮಕ್ಕಳ ಪಟ್ಟಿ ಸಿದ್ದಪಡಿಸಿಕೊಂಡಿರಬೇಕು ಎಂದು ತಿಳಿಸಿದರು.

    ಪ್ರತಿ ಇಲಾಖೆಗೂ 10್ಡ10 ಅಳತೆಯಲ್ಲಿ ಮಳಿಗೆ ನೀಡಲಾಗುವುದು ಕಡ್ಡಾಯವಾಗಿ ಅಧಿಕಾರಿಗಳು ಮಳಿಗೆಗಳಲ್ಲಿ ಇರಲೇಬೇಕು. ಜತೆಗೆ ದೇವದುರ್ಗ ಹಾಗೂ ಅರಕೇರಾ ವ್ಯಾಪ್ತಿಯ ಪಲಾನುಭವಿಗಳಿಗೆ ಮಾತ್ರ ವೇದಿಕೆಯ ಮೇಲೆ ಸಹಾಯಧನ ನೀಡಬೇಕು. ಉಳಿದ ಫಲಾನುಭವಿಗಳಿಗೆ ಮಳಿಗೆಗಳಲ್ಲಿ ಸಹಾಯಧನ ನೀಡುವಂತೆ ತಾಕೀತು ಮಾಡಿದರು.

    ಶಿಕ್ಷಣ ಇಲಾಖೆಯಿಂದ ಕಲಿಕಾ ಚೇತನ ಕಾರ್ಯಕ್ರಮದ ಕುರಿತು ಮಾಹಿತಿ ನೀಡಬೇಕು ಹಾಗೂ ಹತ್ತನೆ ತರಗತಿಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಶ್ರೇಣಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಬೇಕು ಹಾಗೂ ಇತರೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಕಾರ್ಯಕ್ರಮ ರೂಪಿಸುವಂತೆ ತಿಳಿಸಿದರು. ಸಹಾಯಕ ಆಯುಕ್ತ ರಜನಿಕಾಂತ, ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕಿ ರೇಷ್ಮಾ ಪಾಟೀಲ್, , ಅಬಕಾರಿ ಇಲಾಖೆಯ ಅಧೀಕ್ಷಕಿ ಲಕ್ಷ್ಮಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts