More

    ರಾಯಚೂರು ವಿಶ್ವವಿದ್ಯಾಲಯ ಎಂದೇ ಹೆಸರಿಡಿ: ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರಣಪ್ಪ ಮೇಟಿ ಮನವಿ

    ಲಿಂಗಸುಗೂರು: ನೂತನ ವಿವಿಗೆ ರಾಯಚೂರು ವಿಶ್ವವಿದ್ಯಾಲಯವೆಂದು ಹೆಸರಿಡಬೇಕೆಂದು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರಣಪ್ಪ ಮೇಟಿ ನೇತೃತ್ವದಲ್ಲಿ ಬೆಂಬಲಿಗರು ಎಸಿ ರಾಜಶೇಖರ ಡಂಬಳರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

    ರಾಯಚೂರು ವಿವಿ ಒಂದು ತಾಲೂಕು ಅಥವಾ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಿಲ್ಲ. ರಾಜ್ಯದಲ್ಲಿ ಈಗಾಗಲೇ ಮೈಸೂರು, ಬೆಂಗಳೂರು, ತುಮಕೂರು, ದಾವಣಗೇರಾ, ಮಂಗಳೂರು, ಕಲಬುರಗಿ ವಿವಿಗಳ ಹೆಸರು ಅವುಗಳ ಜಿಲ್ಲೆಯ ಹೆಸರನ್ನೇ ಇಡಲಾಗಿದೆ. ಆದರೆ, ರಾಯಚೂರು ನೂತನ ವಿವಿಗೆ ಹೆಸರಿಡುವ ಬಗ್ಗೆ ಏಕಪಕ್ಷೀಯವಾಗಿ ಚರ್ಚೆ ನಡೆಯುತ್ತಿರುವುದು ಸರಿಯಾದ ಕ್ರಮವಲ್ಲ.

    ರಾಯಚೂರು ಜಿಲ್ಲೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹೀಗಾಗಿ ನೂತನ ವಿವಿಗೆ ರಾಯಚೂರು ವಿಶ್ವವಿದ್ಯಾಲಯ ಎಂದು ಹೆಸರಿಡಬೇಕು. ಅಂತಹ ಪರಿಸ್ಥಿತಿ ಬಂದರೆ ಯಾದಗಿರಿ, ರಾಯಚೂರು ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು, ವಿವಿ ಸ್ಥಾಪನೆಗೆ ಹೋರಾಡಿದ ಸಂಘ-ಸಂಸ್ಥೆಗಳ ಮುಖಂಡರ ಸಭೆ ಕರೆದು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಮುಖಂಡರಾದ ಶಿವರಾಯ ದೇಗುಲಮಡಿ, ಯಮನಪ್ಪಗೌಡ ಮೇಟಿ, ಶರಣಪ್ಪ ಕೆಂಗೇರಿ, ಮೌಲಾಸಾಬ್, ಜಿಲಾನಿ ಸೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts