More

    ಟಿಎಲ್‌ಬಿಸಿ ಉಪ ಕಾಲುವೆಗೆ ನೀರು ಹರಿಸಿ

    ರಾಯಚೂರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗುತ್ತಿದ್ದರೂ 94ನೇ ಉಪ ಕಾಲುವೆಗೆ ನೀರು ಹರಿಸುತ್ತಿಲ್ಲ. ಕೂಡಲೇ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ದೇವದುರ್ಗ ತಾಲೂಕಿನ ನಾಗಡದಿನ್ನಿ ಗ್ರಾಮದ ರೈತರು ಒತ್ತಾಯಿಸಿದ್ದಾರೆ.
    ಈ ಕುರಿತು ರೈತರು ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಸೋಮವಾರ ಮನವಿ ಸಲ್ಲಿಸಿದರು. ಸತತ ಮಳೆಯಾಗಿದ್ದರಿಂದ ಇದುವರೆಗೂ ನೀರಿನ ಅವಶ್ಯವಿದ್ದಿಲ್ಲ. ಪ್ರಸ್ತುತ ಒಂದು ವಾರದೊಳಗೆ ನೀರು ಹರಿಸದಿದ್ದಲ್ಲಿ ಬೆಳೆಗಳು ಒಣಗಲಿದ್ದು, ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.
    ಕಾಲುವೆ ಮೇಲ್ಭಾಗದಲ್ಲಿ 94ನೇ ಉಪ ಕಾಲುವೆಗೆ ನೀರು ಹರಿಯದಂತೆ ತಡೆಹಿಡಿಯಲಾಗಿದೆ. ಅದನ್ನು ತೆರವುಗೊಳಿಸುವ ಮೂಲಕ ನಾಗಡದಿನ್ನಿ, ತಿಪ್ಪಲದಿನ್ನಿ ಗ್ರಾಮಗಳಿಗೆ ನೀರು ಹರಿಯುವಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ರೈತರಾದ ಹನುಮಯ್ಯ, ಧರ್ಮರಾಜ, ಬಸವರಾಜ, ತಿಮ್ಮಪ್ಪ, ಶರಣಬಸವ, ನಾಗರಾಜ, ಮುದುಕಪ್ಪ, ಭೀಮಣ್ಣ, ರಾಮಣ್ಣ, ಪಂಪಣ್ಣ, ರಂಗಣ್ಣ, ಕಾಶಪ್ಪ, ರಂಗಪ್ಪ, ಯಂಕಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts