More

    ರಂಗಮಂದಿರ ನವೀಕರಣಕ್ಕೆ 2.5 ಕೋಟಿ ರೂ ಸಲ್ಲ

    ರಾಯಚೂರು: ನಗರದ ಪಂ.ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದ ನವೀಕರಣ ಕಾಮಗಾರಿಯನ್ನು 2.50 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿಯನ್ನು ಕ್ಯಾಷುಟೆಕ್ ಸಂಸ್ಥೆಗೆ ವಹಿಸಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.

    2.50 ಕೋಟಿ ರೂ.ವೆಚ್ಚದಲ್ಲಿ ಹೊಸ ರಂಗಮಂದಿರ ನಿರ್ಮಿಸಬಹುದಾಗಿದ್ದು, ನವೀಕರಣಕ್ಕೆ ಅಷ್ಟೊಂದು ಅನುದಾನ ಬಳಕೆ ಮಾಡುತ್ತಿರುವುದು ಅನುಮಾನ ಮೂಡಿಸಿದೆ. 1997ರಲ್ಲಿ ಉದ್ಘಾಟನೆಗೊಂಡಿದ್ದ ರಂಗಮಂದಿರವನ್ನು 2016-17ನೇ ಸಾಲಿನಲ್ಲಿ ನವೀಕರಣ ಮಾಡಲಾಗಿತ್ತು. ಹೊಸದಾಗಿ ಆಸನ ಹಾಕಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಆಸನಗಳು ಮುರಿದು ಹೋದವು. ಅಂದು ನವೀಕರಣ ಮಾಡಿದ್ದ ಸಂಸ್ಥೆಗೆ ಪುನಃ ನವೀಕರಣ ಕಾಮಗಾರಿ ನೀಡಿರುವುದು ಸರಿಯಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಶಾಸಕರು, ಸಂಸದರು ಹಾಗೂ ಹಿರಿಯ ಅಧಿಕಾರಿಗಳಿಗೆ ಹಣ ನೀಡಿದರೆ ಮಾತ್ರ ಕೆಲಸವಾಗುತ್ತಿದೆ ಎಂದು ಅಧಿಕಾರಿಗಳು ಬಹಿರಂಗವಾಗಿ ಹೇಳುತ್ತಿದ್ದಾರೆ. ರಂಗಮಂದಿರ ನವೀಕರಣದಲ್ಲಿಯೂ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಗಳಿದ್ದು, ಕ್ಯಾಷುಟೆಕ್‌ಗೆ ನೀಡಲಾಗಿರುವ ಕಾಮಗಾರಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

    ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಕ್ಯಾಷುಟೆಕ್ ಸಂಸ್ಥೆಗೆ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ರಂಗಮಂದಿರ ನವೀಕರಣ ಕಾಮಗಾರಿ ನೀಡಲಾಗಿದೆ. ಹಾರೋಬೂದಿಯಿಂದ ಉತ್ಪನ್ನ ತಯಾರಿಸಿ ಪೂರೈಕೆ ಮಾಡಬೇಕಾದ ಕ್ಯಾಷುಟೆಕ್‌ಗೆ ರಂಗಮಂದಿರ ನವೀಕರಣ ಕಾಮಗಾರಿ ವಹಿಸಲಾಗಿದೆ. ಶಾಸಕ ಡಾ.ಶಿವರಾಜ ಪಾಟೀಲ್ ಸಹೋದರ ಚನ್ನಪ್ಪಗೌಡ ಕ್ಯಾಷುಟೆಕ್ ಹೆಸರಿನಲ್ಲಿ ಗುತ್ತಿಗೆ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್, ಕಲಾವಿದರಾದ ಅಲ್ತಾಫ್ ರಂಗಮಿತ್ರ, ಬಸವರಾಜ ಮಿಮಿಕ್ರಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts