More

    ಹತ್ತು ದಿನ ರಾತ್ರಿ ಕರ್ಫ್ಯೂ, ಜ.7ರವರೆಗೆ ಇರಲಿದೆ ಬಿಗಿನಿಯಮ

    ರಾಯಚೂರು: ಸರ್ಕಾರದ ನಿರ್ದೇಶನದಂತೆ ಮಂಗಳವಾರ ರಾತ್ರಿಯಿಂದ ಜ.7ರ ರಾತ್ರಿವರೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಹೇಳಿದ್ದಾರೆ.

    ಸ್ಥಳೀಯ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ವ್ಯಾಪಾರಸ್ಥರು ರಾತ್ರಿ 10ರೊಳಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು. ಸಾರ್ವಜನಿಕರು ಅನಗತ್ಯ ಓಡಾಡದೆ, ನಿಯಮಗಳನ್ನು ಪಾಲಿಸಬೇಕು. ಕರ್ಫ್ಯೂ ಪಾಲನೆ ನಿಟ್ಟಿನಲ್ಲಿ ರಾಯಚೂರು ನಗರದಲ್ಲಿ 100, ಸಿಂಧನೂರು ವಿಭಾಗದಲ್ಲಿ 60, ಲಿಂಗಸುಗೂರು ವಿಭಾಗದಲ್ಲಿ 70 ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲಾಗಿದೆ. ಡಿವೈಎಸ್ಪಿ, ಸಿಪಿಐ, ಪಿಎಸ್‌ಐಗಳು ರಾತ್ರಿ ಒಂಬತ್ತರಿಂದ ಗಸ್ತು ನಡೆಸಿ ಅಂಗಡಿಗಳನ್ನು ಮುಚ್ಚುವಂತೆ ತಿಳಿಸಲಿದ್ದಾರೆ. ರಾಯಚೂರಿನಲ್ಲಿ 16, ಸಿಂಧನೂರಿನಲ್ಲಿ ಆರು, ಲಿಂಗಸುಗೂರಿನಲ್ಲಿ 10 ಚೆಕ್‌ಪೋಸ್ಟ್‌ಗಳನ್ನು ಪ್ರಾರಂಭಿಸಿ ತಪಾಸಣೆ ನಡೆಸಲಾಗುವುದು. ವೈದ್ಯಕೀಯ ಸೇರಿದಂತೆ ಇತರ ಅಗತ್ಯ ಓಡಾಟಕ್ಕೆ ಸಮಸ್ಯೆಯಿಲ್ಲ. ನಿಯಮ ಉಲ್ಲಂಘಿಸಿ ವ್ಯಾಪಾರ ನಡೆಸುವವರು ಹಾಗೂ ಅನಗತ್ಯವಾಗಿ ಓಡಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.

    ಮದುವೆ ಮತ್ತು ಇತರ ಕಾರ್ಯಕ್ರಮಗಳಿಗೆ ಸಂಬಂಧಿಸಿ ಸರ್ಕಾರದ ನಿರ್ಬಂಧಗಳನ್ನು ಪಾಲಿಸಬೇಕು. ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗಿದೆ. ಡಿ.31ರಂದು ಹೆಚ್ಚಿನ ಸಿಬ್ಬಂದ್ನಿ ನೇಮಕ ಮಾಡಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಬಿ.ನಿಖಿಲ್ ಹೇಳಿದರು. ಡಿವೈಎಸ್ಪಿ ಶಿವನಗೌಡ ಪಾಟೀಲ್, ಸಿಪಿಐಗಳಾದ ಫಸಿಯುದ್ದೀನ್, ರಾಮರೆಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts