More

    ಬೆಂಬಲ ಬೆಲೆಯಲ್ಲಿ ಹತ್ತಿ, ಮೆಣಸಿನಕಾಯಿ ಖರೀದಿಸಿ

    ರಾಯಚೂರು: ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಹತ್ತಿ ಮತ್ತು ಮೆಣಸಿನಕಾಯಿ ಬೆಳೆದ ರೈತರು ಸಂಕಷ್ಟಕ್ಕಿಡಾಗಿದ್ದು, ಬೆಂಬಲ ಬೆಲೆಯಲ್ಲಿ ಹತ್ತಿ, ಮೆಣಸಿನಕಾಯಿ ಖರೀದಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಜೆಡಿಎಸ್‌ನಿಂದ ಸೋಮವಾರ ಪ್ರತಿಭಟನೆ ನಡೆಸಿ, ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರಗೆ ಮನವಿ ಸಲ್ಲಿಸಲಾಯಿತು.

    ಕೆಲವು ತಿಂಗಳ ಹಿಂದೆ ಕ್ವಿಂಟಾಲ್‌ಗೆ 12 ಸಾವಿರ ರೂ. ದರವಿದ್ದದ್ದು ಈಗ 6 ಸಾವಿರ ರೂ.ಗೆ ಕುಸಿದಿದೆ. ಖರೀದಿದಾರರು ಉದ್ದೇಶಪೂರ್ವಕವಾಗಿ ದರ ಇಳಿಕೆಯಾಗುವಂತೆ ಮಾಡಿದ್ದಾರೆ. ಮಾರಾಟ ಶುಲ್ಕ ಇಳಿಕೆಯಿಂದಾಗಿ ಹತ್ತಿ ಗಿರಣಿ ಮಾಲೀಕರು ವಿದೇಶದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬೆಳೆ ಇಳಿಯುವಂತಾಗಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ದರ ಕುಸಿಯದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಮೆಣಸಿನಕಾಯಿ ಮಾರಾಟ ಆರಂಭವಾದ ನಂತರದಲ್ಲಿ ಅದರ ದರದಲ್ಲಿಯೂ ಕುಸಿತವಾಗಿದ್ದು, ರೈತರು ಖರ್ಚು ಮಾಡಿದ ಹಣವೂ ಕೈಗೆ ಸಿಗದಂತಾಗಿದೆ. ಕೂಡಲೇ ಸರ್ಕಾರ ಸಭೆ ಕರೆದು ಹತ್ತಿ, ಮೆಣಸಿನಕಾಯಿಗೆ ಬೆಂಬಲ ಬೆಲೆ ನಿಗದಿ ಪಡಿಸಿ ಖರೀದಿ ಕೇಂದ್ರಗಳ ಮೂಲಕ ಖರೀದಿಗೆ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts