More

    ವಿದ್ಯಾರ್ಥಿಗಳು ಸಂಶೋಧನೆಯತ್ತ ಗಮನಹರಿಸಲಿ

    ರಾಯಚೂರು: ವಿದ್ಯಾರ್ಥಿಗಳು ಪಠ್ಯಕ್ರಮಕ್ಕೆ ಸೀಮಿತರಾಗದೆ ಹೊಸ ಆವಿಷ್ಕಾರ ಮತ್ತು ಸಂಶೋಧನೆಗಳತ್ತ ಗಮನ ಹರಿಸುವ ಮೂಲಕ ಹೊಸತನ ಬೆಳೆಸಿಕೊಳ್ಳಬೇಕು ಎಂದು ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಸಲಹೆ ನೀಡಿದರು. ವಿವಿಯಲ್ಲಿ ಗುರುವಾರ ರಸಾಯನಶಾಸ್ತ್ರ ಪ್ರಯೋಗಾಲ ಉದ್ಘಾಟಿಸಿ ಮಾತನಾಡಿದರು. ಸಂಶೋಧನೆಗಳಿಗೆ ಪ್ರಯೋಗಾಲಯ ಸದ್ಬಳಕೆಯಾಗಲಿ ಎಂದರು.

    ಕುಲಸಚಿವ ಪ್ರೊ.ಎಂ.ವಿಶ್ವನಾಥ ಮಾತನಾಡಿ, ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯೋಗಾಲಯ ಪ್ರಾರಂಭಿಸಲಾಗಿದೆ. ವಿವಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಯರಿಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಪ್ರಯೋಗಾಲಯಕ್ಕಾಗಿ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಕಳುಹಿಸಬೇಕಾಗಿತ್ತು. ವಿವಿಯಲ್ಲಿಯೇ ಪ್ರಯೋಗಾಲಯ ಆರಂಭದಿಂದ ಹೆಚ್ಚಿನ ಅನುಕೂಲವಾಗಿದೆ. ಇದಕ್ಕೆ ಬೇಕಾದ ಎಲ್ಲ ರಸಾಯನಿಕ, ಪರಿಕರಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ಉಪ ಕುಲಸಚಿವ ಡಾ.ಜಿ.ಎಸ್.ಬಿರಾದರ, ಪ್ರಾಧ್ಯಾಪಕರಾದ ಪ್ರೊ.ಪಿ.ಭಾಸ್ಕರ್, ಪ್ರೊ.ಸಿ.ಎಸ್.ಪಾರ್ವತಿ, ಜಿ.ಎಚ್.ರಾಜೇಶ, ಡಾ.ವಿಜಯಲಕ್ಷ್ಮಿ, ಶಿವಲೀಲಾ ಪಾಟೀಲ್, ಅಭಿವೃದ್ಧಿ ಮಂಡಳಿ ನಿರ್ದೇಸಕ ಡಾ.ರಾಘವೇಂದ್ರ ಪತ್ತೇಪುರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts