More

  ಶಿರಡಿ ಸಾಯಿಬಾಬಾರ ನಾಣ್ಯಗಳ ದರ್ಶನ

  ರಾಯಚೂರು: ನಗರದ ಸಾರ್ವಜನಿಕ ಉದ್ಯಾನದಲ್ಲಿರುವ ಓಂ ಸಾಯಿ ಧ್ಯಾನ ಮಂದಿರದಲ್ಲಿ ಡಿ.8ರಂದು ಶಿರಡಿ ಸಾಯಿಬಾಬಾ ನೀಡಿರುವ 9 ನಾಣ್ಯಗಳ ದರ್ಶನ ಹಾಗೂ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಸಾಯಿಕಿರಣ ಆದೋನಿ ತಿಳಿಸಿದರು.

  ಸಾಯಿಬಾಬಾ ಸಮಾಧಿಗೆ ಹೋಗುವ ಮುನ್ನ 35 ವರ್ಷಗಳ ಕಾಲ ತಮ್ಮ ಸೇವೆ ಮಾಡಿದ ಲಕ್ಷ್ಮೀಬಾಯಿ ಶಿಂಧೆ ಎಂಬುವವರಿಗೆ 9 ನಾಣ್ಯಗಳನ್ನು ನೀಡಿದ್ದರು. ಅವರ ಕುಟುಂಬಸ್ಥರು ತಲೆಮಾರಿನಿಂದ ಅವುಗಳನ್ನು ರಕ್ಷಣೆ ಮಾಡಿಕೊಂಡು ಬಂದಿದ್ದಾರೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

  ನಾಣ್ಯಗಳ ಪೂಜೆ ಹಾಗೂ ದರ್ಶನದಿಂದ ಜನರ ದಾರಿದ್ರೃ ದೂರವಾಗುತ್ತದೆ ಎನ್ನುವ ಪ್ರತೀತಿಯಿದ್ದು, ಜಿಲ್ಲೆಯ ಜನರಿಗೂ ನಾಣ್ಯಗಳ ದರ್ಶನ ದೊರೆಯಲಿ ಎನ್ನುವ ಕಾರಣಕ್ಕೆ ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ನಾಣ್ಯಗಳನ್ನು ಕುಟುಂಬಸ್ಥರು ತಂದು ದರ್ಶನಕ್ಕೆ ಇಡುತ್ತಿದ್ದಾರೆ. ನಾಣ್ಯಗಳಿಗೆ ವಿಶೇಷ ಪೂಜೆ ಏರ್ಪಡಿಸಲಾಗಿದ್ದು, ಜನರು ನಾಣ್ಯಗಳ ದರ್ಶನ ಪಡೆಯಬೇಕು ಎಂದು ತಿಳಿಸಿದರು.

  ಮಂದಿರದ ಆಡಳಿತ ಮಂಡಳಿ ಪದಾಧಿಕಾರಿಗಳಾದ ಪ್ರವೀಣ ಪ್ರಭುಶೆಟ್ಟರ್, ಡಿ.ಕೆ.ಮುರಳಿ ಯಾದವ, ಅರುಣಕುಮಾರ ಉಪಾಸಿ, ಪ್ರಣವ ಆದೋನಿ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts