More

  ರಸ್ತೆಬದಿ ವ್ಯಾಪಾರಿಗಳನ್ನು ಮಾರುಕಟ್ಟೆಗೆ ಸ್ಥಳಾಂತರಿಸಿ

  ರಾಯಚೂರು: ನಗರದ ಎಂ.ಈರಣ್ಣ ವೃತ್ತ ಸೇರಿ ಹಲವೆಡೆ ರಸ್ತೆ ಬದಿ ತರಕಾರಿ ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರನ್ನು ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಅ.6ರಂದು ನಗರಸಭೆ ಕಾರ್ಯಾಲಯದ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಮಹಾವೀರ ತಿಳಿಸಿದರು.

  ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ರಸ್ತೆ ಬದಿ ತರಕಾರಿ ಮಾರಾಟದಿಂದ ವಾಹನ ಸಂಚಾರಕ್ಕೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಓಡಾಡುತ್ತಿದ್ದು, ಅಪಘಾತಕ್ಕೆ ಕಾರಣವಾಗುವಂತಾಗಿದೆ ಎಂದು ದೂರಿದರು.

  ಕಳೆದ 13 ತಿಂಗಳಿಂದ ಎಂ.ಈರಣ್ಣ ವೃತ್ತದಲ್ಲಿ ರಸ್ತೆ ಬದಿ ತರಕಾರಿ ಮಾರಾಟ ಮಾಡುತ್ತಿರುವವರನ್ನು ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಒತ್ತಾಯ ಮಾಡುತ್ತಾ ಬರಲಾಗುತ್ತಿದ್ದರೂ ನಗರಸಭೆ ಸದಸ್ಯೆ ಪತಿ ರವೀಂದ್ರ ಜಲ್ದಾರ್ ವ್ಯಾಪಾರಸ್ಥರಿಗೆ ಸ್ಥಳಾಂತರವಾಗದಂತೆ ಕುಮ್ಮಕ್ಕು ನೀಡುತ್ತಾ ಬರುತ್ತಿದ್ದಾರೆ.

  ಕರೊನಾ ಸಂದರ್ಭದಲ್ಲಿ ನಗರದ ವಿವಿಧೆಡೆ ರಸ್ತೆ ಬದಿ ತರಕಾರಿ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ನಗರಸಭೆಗೆ ಕರ ವಸೂಲಿಯಿಂದ ಬರುತ್ತಿದ್ದ 40 ಲಕ್ಷ ರೂ.ಗಳ ಆರ್ಥಿಕ ನಷ್ಟವುಂಟಾಗಿದೆ. ಮುಂದಿನ ದಿನಗಳಲ್ಲಿ ರವೀಂದ್ರ ಜಲ್ದಾರ್ ಅಕ್ರಮ ಆಸ್ತಿ ಬಗ್ಗೆ ಇಡಿಗೆ ದೂರು ನೀಡಲಾಗುವುದು ಎಂದು ಎನ್.ಮಹಾವೀರ ತಿಳಿಸಿದರು. ಸಂಘದ ಪದಾಧಿಕಾರಿಗಳಾದ ಪ್ರಭು ನಾಯಕ, ಖಾಜಪ್ಪ, ಉದಯಕುಮಾರ, ತಿಮ್ಮಾರೆಡ್ಡಿ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts