More

    ರಿಮ್ಸ್‌ನಲ್ಲಿ ಜಟಿಲ ಕಾಯಿಲೆಗೆ ಚಿಕಿತ್ಸೆ

    ರಾಯಚೂರು: ಡಿಸ್‌ಮೆನಿಟೆಡ್ ಸ್ಟೆಫಲೋಕಾಲ್ ಸೆಸ್ಸಿಸ್ ಎನ್ನುವ ಜಟಿಲ ಕಾಯಿಲೆಯಿಂದ ನರಳುತ್ತಿದ್ದ ಬಾಲಕನೊಬ್ಬನಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.

    ತಾಲೂಕಿನ ದೇವಸುಗೂರಿನ ಹನುಮಂತ-ಶಿವಮ್ಮ ದಂಪತಿಯ ಮಗ 15 ವರ್ಷದ ರಾಮು ಈಗ ಗುಣಮುಖನಾಗಿದ್ದಾನೆ. ಬಾಲಕನ ಎರಡು ಪಕ್ಕೆಗಳಲ್ಲಿ ಹಾಗೂ ಹೃದಯ ಭಾಗದಲ್ಲಿ ಕೀವು ತುಂಬಿಕೊಂಡು ಉಸಿರಾಡುವುದೇ ಕಷ್ಟ ಎನ್ನುವ ಸ್ಥಿತಿಯಲ್ಲಿದ್ದಾಗ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಈತ ಉಳಿಯುವುದೇ ಕಷ್ಟ ಎಂದು ಬೆಂಗಳೂರು, ಹೈದರಾಬಾದ್‌ಗೆ ಕರೆದುಕೊಂಡು ಹೋಗಲು ವೈದ್ಯರು ಸಲಹೆ ನೀಡಿದ್ದರು. ಬಡ ಕುಟುಂಬ ಮಗನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಸಾಧ್ಯವಾಗದೆ ರಿಮ್ಸ್ ಆಸ್ಪತ್ರೆ ಕರೆತಂದು ಸೇರಿಸಿದ್ದರು. ರಿಮ್ಸ್ ವೈದ್ಯರು ಬಾಲಕನನ್ನು 19 ದಿನಗಳ ಐಸಿಯುನಲ್ಲಿಟ್ಟು, ಶಸ್ತ್ರ ಚಿಕಿತ್ಸೆ ನಡೆಸಿ ದೇಹದಿಂದ ಅರ್ಧ ಲೀಟರ್ ಕೀವು ತೆಗೆದಿದ್ದಾರೆ. ಚೇತರಿಸಿಕೊಂಡ ಆತನನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ.

    ಗಂಭೀರ ಕಾಯಿಲೆಯನ್ನು ಸವಾಲಾಗಿ ಸ್ವೀಕರಿಸಿ ಚಿಕಿತ್ಸೆ ನೀಡಲಾಗಿದೆ. ಸಂಪೂರ್ಣ ಉಚಿತ ಚಿಕಿತ್ಸೆ ನೀಡಿ ಬಾಲಕನ ಜೀವ ರಕ್ಷಣೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳಿದ್ದು, ಎಲ್ಲ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
    | ಡಾ.ಬಸವರಾಜ ಪೀರಾಪುರ ನಿರ್ದೇಶಕ, ರಿಮ್ಸ್ ಆಸ್ಪತ್ರೆ, ರಾಯಚೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts