More

    ಇತಿಹಾಸದ ಅರಿವು ನಮಗಿಲ್ಲ ಎಂದ ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ

    ರಾಯಚೂರು: ಇತಿಹಾಸವನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಇತಿಹಾಸವನ್ನು ಅಂಕ ಪಡೆಯಲು ಇರುವ ಪಠ್ಯವಾಗಿ ನೋಡುತ್ತಿದ್ದೇವೆಯೇ ಹೊರತು, ಇದನ್ನು ಓದುವುದರಿಂದ ಇರುವ ಲಾಭ, ಉಪಯೋಗಗಳ ಬಗ್ಗೆ ಚಿಂತಿಸುತ್ತಿಲ್ಲ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಹೇಳಿದರು.

    ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕಲ್ಯಾಣ ಕರ್ನಾಟಕ ಇತಿಹಾಸ ಮತ್ತು ಸಾಮಾಜಿಕ ಬೆಳವಣಿಗೆ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

    ನಾವು ಇತಿಹಾಸವನ್ನು ಓದುವುದರಲ್ಲಿ ನಿರತರಾಗಿದ್ದೇವೆ ಹೊರತು ಇತಿಹಾಸ ಸೃಷ್ಟಿಸುತ್ತಿಲ್ಲ. ಇತಿಹಾಸವನ್ನು ವೈಯಕ್ತಿಕ ಮತ್ತು ಸಮಾಜದ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಬಹುದಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಭವ್ಯವಾದ ಇತಿಹಾಸವಿದ್ದು, ಅದರ ಅರಿವು ನಮಗೆ ಇಲ್ಲ. ಇದರಿಂದಾಗಿ ನಾವು ಕೀಳರಿಮೆಯಿಂದ ಬದುಕುತ್ತಿದ್ದು, ದಾಸ್ಯ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೇವೆ. ನಮ್ಮ ಭಾಗದ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದು, ಅದರ ಅರಿವು ವಿಸ್ತರಿಸದೆ ಇರುವುದು ಈ ಭಾಗ ಹಿಂದುಳಿಯಲು ಕಾರಣವಾಗಿದೆ ಎಂದು ಪ್ರೊ.ಹರೀಶ ರಾಮಸ್ವಾಮಿ ತಿಳಿಸಿದರು.

    ಗುಲ್ಬರ್ಗ ವಿವಿ ಸಿಂಡಿಕೇಟ್ ಸದಸ್ಯ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿರುವುದನ್ನು ಗಮನಿಸಿ 371 ಜೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಆದರೆ ಅದನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಜಾಗೃತಿ ಕೊರತೆ ನಾವು ಹಿಂದುಳಿಯಲು ಕಾರಣವಾಗಿದೆ ಎಂದು ಹೇಳಿದರು.

    ಪ್ರಾಚಾರ್ಯ ಆರ್.ಮಲ್ಲನಗೌಡ ಮಾತನಾಡಿ, ಪ್ರತಿಯೊಂದಕ್ಕೂ ನಾವು ಸರ್ಕಾರ, ರಾಜಕಾರಣಿಗಳು, ಅಧಿಕಾರಿಗಳ ಮೇಲೆ ಅವಲಂಬಿತರಾಗಿದ್ದೇವೆ. ಬದಲಾವಣೆ ಎನ್ನುವುದು ಕೆಳ ಹಂತದಿಂದ ಪ್ರಾರಂಭವಾಗುತ್ತದೆ. ಬದಲಾವಣೆ ನಮ್ಮಿಂದ ಆರಂಭವಾಗಲಿ ಎಂದು ಯೋಚಿಸುವುದಿಲ್ಲ. ಹೀಗಾಗಿ ನಾವು ಅಭಿವೃದ್ಧಿಯಲ್ಲಿ ಹಿಂದುಳಿಯುವಂತಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts