More

    ನೆರೆ ಹಾವಳಿಗೆ ಪೂರ್ವ ಸಿದ್ಧತೆ ಇರಲಿ ಎಂದು ವಿಡಿಯೋ ಸಂವಾದದಲ್ಲಿ ಡಿಸಿಗೆ ಕಂದಾಯ ಸಚಿವ ಆರ್.ಅಶೋಕ ಸೂಚನೆ

    ರಾಯಚೂರು: ಮುಂಗಾರು ಹಂಗಾಮಿಗೆ ಸಿದ್ಧತೆಗಳನ್ನು ನಡೆಸುವ ಜತೆಗೆ ನೆರೆ ಹಾವಳಿ ತಡೆಗೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಜಿಲ್ಲಾಡಳಿತಗಳು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ ಸೂಚಿಸಿದರು.

    ವಿಪತ್ತು ನಿರ್ವಹಣೆ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಸೋಮವಾರ ನಡೆದ ವಿಡಿಯೋ ಸಂವಾದದಲ್ಲಿ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರರಿಂದ ಮಾಹಿತಿ ಪಡೆದು ಮಾತನಾಡಿದರು.

    ನೆರೆ ಪೀಡಿತ ಗ್ರಾಮಗಳನ್ನು ಗುರುತಿಸಿ ಜನ, ಜಾನುವಾರು ಸ್ಥಳಾಂತರ, ಅಗತ್ಯವಿರುವ ಬೋಟ್ ಮತ್ತು ಇತರೆ ಸಾಮಗ್ರಿಗಳನ್ನು ಸಂಗ್ರಹಿಸಬೇಕು. ಸಂತ್ರಸ್ತರ ಸಂಖ್ಯೆಗೆ ಅನುಗುಣವಾಗಿ ಗಂಜಿ ಕೇಂದ್ರ ಸ್ಥಾಪಿಸುವುದು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಮುಳುಗಡೆ ಪ್ರದೇಶದ ಜನರನ್ನು ಮುಂಚಿತವಾಗಿ ಸ್ಥಳಾಂತರ ಮಾಡಬೇಕು. ಬರಲು ನಿರಾಕರಿಸಿದರೆ ಬಲವಂತದಿಂದ ಅವರನ್ನು ಸ್ಥಳಾಂತರಿಸಬೇಕು ಎಂದುಆರ್.ಅಶೋಕ ಸೂಚಿಸಿದರು.

    111 ಹಳ್ಳಿಗಳಲ್ಲಿ ಮುನ್ನೆಚ್ಚರಿಕೆ ಅಗತ್ಯ
    ಸಚಿವರ ವಿಡಿಯೋ ಸಂವಾದದ ನಂತರ ಅಧಿಕಾರಿಗಳ ಸಭೆ ನಡೆಸಿದ ಡಿಸಿ ವೆಂಕಟೇಶಕುಮಾರ, ಗ್ರಾಪಂಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳನ್ನು ಮರು ರಚಿಸಬೇಕು. ಪ್ರವಾಹದಿಂದ ಸಮಸ್ಯೆ ಎದುರಿಸುವ ತುಂಗಭದ್ರಾ ನದಿ ತೀರದ 33 ಗ್ರಾಮಗಳು, ಕೃಷ್ಣಾ ನದಿ ತೀರದ 78 ಹಳ್ಳಿಗಳಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

    ಲಿಂಗಸುಗೂರು ತಾಲೂಕಿನಲ್ಲಿರುವ ನಡುಗಡ್ಡೆಗಳ ಗ್ರಾಮಸ್ಥರನ್ನು ಮುಂಚಿತವಾಗಿ ಸ್ಥಳಾಂತರಿಸಲು ಗಮನ ಹರಿಸಬೇಕು. ಮುಳುಗಡೆ ಗ್ರಾಮಗಳಲ್ಲಿನ ಜನರ ಸಮೀಕ್ಷೆ ನಡೆಸಿ ಗರ್ಭಿಣಿಯರು, ಅನಾರೋಗ್ಯ ಪೀಡಿತರು, ಅಂಗವಿಕಲರನ್ನು ಗುರುತಿಸಬೇಕು. ನಡುಗಡ್ಡೆಯಲ್ಲಿ ಗ್ರಾಮಗಳ ಸ್ಥಳಾಂತರಕ್ಕೆ ಭೂಮಿ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿಶಾಲವಾದ ಸ್ಥಳಗಳನ್ನು ಗುರುತಿಸಿ ಅಲ್ಲಿಗೆ ಜನರನ್ನು ಸ್ಥಳಂತರಿಸಬೇಕು. ವಾರದಲ್ಲಿ ಸಿದ್ಧತೆ ಮಾಹಿತಿ ಸಲ್ಲಿಸುವಂತೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts