More

    ರಾಷ್ಟ್ರೀಯ ನೇಮಕ ನೀತಿ ಜಾರಿ ಬೇಡ; ಜಯ ಕರ್ನಾಟಕ ಸಂಘಟನೆ ಒತ್ತಾಯ

    ರಾಯಚೂರು: ಕೇಂದ್ರ ಸರ್ಕಾರ ಗೆಜೆಟೆಡ್ ಅಲ್ಲದ ಹುದ್ದೆಗಳ ನೇಮಕಕ್ಕೆ ಏಕರೂಪ ನೇಮಕಾತಿ ನೀತಿ ತರಲು ಹೊರಟಿರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗಲಿದ್ದು, ಇದನ್ನು ಕೈಬಿಡಬೇಕು ಎಂದು ಜಯ ಕರ್ನಾಟಕ ಸಂಘಟನೆ ಒತ್ತಾಯಿಸಿದೆ.

    ಈ ಕುರಿತು ಸಂಘಟನೆ ನಿಯೋಗ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರ್‌ಗೆ ಮಂಗಳವಾರ ಮನವಿ ಸಲ್ಲಿಸಿ, ಪ್ರಾದೇಶಿಕ ಭಾಷೆಗಳನ್ನು ಐಚ್ಛಿಕ ವಿಷಯವನ್ನಾಗಿ ಓದಿರುವ ಕನ್ನಡಿಗರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕಾಗುವುದರಿಂದ ನೇಮಕದಲ್ಲಿ ಅನ್ಯಾಯವಾಗಲಿದೆ ಎಂದು ದೂರಿದರು.

    ಸರ್ಕಾರದ ಈ ನೀತಿಯಿಂದ ಹೊರ ರಾಜ್ಯದ ಅಧಿಕಾರಿಗಳು ನೇಮಕವಾಗಲಿದ್ದು, ಇಲ್ಲಿನ ಸಂಸ್ಕೃತಿ, ಸಂಪ್ರದಾಯಗಳು ಅರಿವು ಇಲ್ಲದೆ ಆಡಳಿತ ನಡೆಸಲು ಅನಾನುಕೂಲವಾಗಲಿದೆ. ಈಗಾಗಲೇ ರಾಜ್ಯದ ಖಾಸಗಿ ಕ್ಷೇತ್ರದಲ್ಲಿ ಹೊರ ರಾಜ್ಯದವರ ದಬ್ಬಾಳಿಕೆ ಹೆಚ್ಚಾಗುತ್ತಿದೆ.

    ಕಲ್ಯಾಣ ಕರ್ನಾಟಕ ಹಾಗೂ ಗ್ರಾಮೀಣ ಭಾಗದ ವಿದ್ಯಾವಂತ ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಸಂದರ್ಭದಲ್ಲಿ ಸರ್ಕಾರದ ಈ ನೀತಿಯಿಂದ ಈ ಭಾಗದ ಜನರಿಗೆ ಉದ್ಯೋಗಗಳು ದೊರೆಯದಂತಹ ಸ್ಥಿತಿ ಎದುರಾಗಲಿದೆ.

    ಕೇಂದ್ರ ಸರ್ಕಾರದ ಏಕರೂಪ ನೇಮಕಾತಿ ನೀತಿ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟು ಮಾಡಲಿದೆ. ರಾಜ್ಯ ರಾಜ್ಯಗಳ ನಡುವೆ ಉದ್ಯೋಗಕ್ಕಾಗಿ ತಿಕ್ಕಾಟ ನಡೆಯುವ ಸ್ಥಿತಿ ಎದುರಾಗಲಿದೆ. ಕಾರಣ ಏಕರೂಪ ನೇಮಕಾತಿ ನೀತಿ ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಸಂಘಟನೆ ಜಿಲ್ಲಾಧ್ಯಕ್ಷ ಎಸ್.ಶಿವಕುಮಾರ ಯಾದವ್, ಪದಾಧಿಕಾರಿಗಳಾದ ಮುರಳಿ ಕಟ್ಟಿಮನಿ, ವೆಂಕಟೇಶ ರೆಡ್ಡಿ, ಮಹ್ಮದ್ ರಫಿ, ಸುರೇಶ ಶಕ್ತಿನಗರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts