More

    ವಾಲ್ ಆಪರೇಟರ್‌ಗಳಿಗೆ ವೇತನ ಪಾವತಿಸಿ

    ರಾಯಚೂರು: ನಗರಸಭೆಯ ನೀರು ಶುದ್ಧೀಕರಣ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಲ್ ಆಪರೇಟರ್‌ಗಳಿಗೆ ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ನಗರಸಭೆ ದಿನಗೂಲಿ ನೌಕರರ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

    ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಲಾಯಿತು. ಪೌರ ಕಾರ್ಮಿಕರು ವೇತನಕ್ಕಾಗಿ ಪ್ರತಿ ತಿಂಗಳು ಕಚೇರಿಗೆ ಅಲೆಯುವಂತಾಗಿದೆ. ಖಾಸಗಿ ಏಜೆನ್ಸಿಗಳು ಪಿಎಫ್ ಮತ್ತು ಇಎಸ್‌ಐ ಪಾವತಿಸದೆ ದುಡಿಸಿಕೊಳ್ಳುತ್ತಿವೆ ಎಂದು ದೂರಿದರು.

    ಕಳೆದ 18 ವರ್ಷಗಳಿಂದ ನೀರು ಶುದ್ಧೀಕರಣ ಘಟಕದಲ್ಲಿ 25 ಜನರು ವಾಲ್ ಆಪರೇಟರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಯಂ ಸ್ವರೂಪದ ಕೆಲಸವಿದ್ದರೂ ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳಲಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನವನ್ನೂ ನೀಡದೆ ಸಂವಿಧಾನಿಕ ಹಕ್ಕು ಉಲ್ಲಂಘಿಸಲಾಗುತ್ತಿದೆ. ರಜೆ, ಸುರಕ್ಷಿತ ಸಲಕರಣೆಗಳನ್ನು ನೀಡಲಾಗಿಲ್ಲ. ಕಳೆದ ಏಳೆಂಟು ತಿಂಗಳಿಂದ ವೇತನ ಪಾವತಿ ಮಾಡದ ಕಾರಣ ವಾಲ್ ಆಪರೇಟರ್‌ಗಳು ಕುಟುಂಬ ನಿರ್ವಹಣೆಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನವನ್ನು ನೇರವಾಗಿ ಖಾತೆಗೆ ಜಮಾ ಮಾಡಬೇಕು. ಪಿಎಫ್ ಹಾಗೂ ಇಎಸ್‌ಐ ಪಾವತಿಸದೆ ನಿರ್ಲಕ್ಷೃ ವಹಿಸಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts